ADVERTISEMENT

ಲಿವರ್‌ಪೂಲ್–ರಿಯಲ್ ಮ್ಯಾಡ್ರಿಡ್ ಮುಖಾಮುಖಿ

ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿ ಫೈನಲ್ ಪಂದ್ಯ ಇಂದು; ಥಿಯಾಗೊ, ಫ್ಯಾಬಿನೊ ಫಿಟ್‌

ರಾಯಿಟರ್ಸ್
Published 28 ಮೇ 2022, 12:52 IST
Last Updated 28 ಮೇ 2022, 12:52 IST

ಪ್ಯಾರಿಸ್: ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯ ಫೈನಲ್‌ಗೆ ಸಜ್ಜಾಗುತ್ತಿರುವ ಲಿವರ್‌ಪೂಲ್‌ತಂಡದ ಮಿಡ್‌ಫೀಲ್ಡರ್‌ಗಳಾದ ಥಿಯಾಗೊ ಅಲ್ಕಂತರ ಮತ್ತು ಫ್ಯಾಬಿನ್ಹೊ ಅವರು ಫಿಟ್‌ ಆಗಿದ್ದು ಪಂದ್ಯಕ್ಕೆ ಲಭ್ಯರಿರುವರು.

ಶನಿವಾರ ರಾತ್ರಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಲಿವರ್‌ಪೂಲ್ ತಂಡ ರಿಯಲ್ ಮ್ಯಾಡ್ರಿಡ್ ವಿರುದ್ಧ ಸೆಣಸಲಿದೆ. ಥಿಯಾಗೊ ಮತ್ತು ಫ್ಯಾಬಿನ್ಹೊ ಅವರು ಫಿಟ್ ಆಗಿದ್ದಾರೆ ಎಂದು ರಿಯಲ್ ಮ್ಯಾಡ್ರಿಡ್‌ನ ಮ್ಯಾನೇಜರ್ ಜಾರ್ಜೆನ್ ಕ್ಲಾಪ್‌ ತಿಳಿಸಿದ್ದಾರೆ.

ಕಳೆದ ಭಾನುವಾರ ನಡೆದ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಥಿಯಾಗೊ ಮೊದಲಾರ್ಧದಲ್ಲೇ ಮಾಂಸಖಂಡದ ಸೆಳೆತಕ್ಕೆ ಒಳಗಾಗಿ ಅಂಗಣ ತೊರೆದಿದ್ದರು. ವೊಲ್ವೆರ್‌ಹ್ಯಾಂಪ್ಡನ್ ವಾಂಡರರ್ಸ್ ಎದುರಿನ ಆ ಪಂದ್ಯದಲ್ಲಿ ಬದಲಿ ಆಟಗಾರ ಕಣಕ್ಕೆ ಇಳಿದಿದ್ದರು.

ADVERTISEMENT

ಮೇ 10ರಂದು ನಡೆದ ಆ್ಯಶ್ಟನ್ ವಿಲ್ಲಾ ಎದುರಿನ ಪಂಧ್ಯದಲ್ಲಿ ತಂಡ 2–1ರಲ್ಲಿ ಜಯ ಗಳಿಸಿತ್ತು. ಆ ಪಂದ್ಯದಲ್ಲಿ ಗಾಯಾಳುವಾಗಿ ಫ್ಯಾಬಿನ್ಹೊ ಹೊರಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.