ADVERTISEMENT

ಟರ್ಕಿ ಭೂಕಂಪದಲ್ಲಿ ಫುಟ್‌ಬಾಲ್‌ ಆಟಗಾರ ಅಹ್ಮೆತ್‌ ಎಯುಪ್‌ ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 8:33 IST
Last Updated 8 ಫೆಬ್ರುವರಿ 2023, 8:33 IST
ಅಹ್ಮೆತ್‌ ಎಯುಪ್‌
ಅಹ್ಮೆತ್‌ ಎಯುಪ್‌   

ಅಂಕಾರ: ಟರ್ಕಿ ಭೂಕಂಪದಲ್ಲಿ ಫುಟ್‌ಬಾಲ್‌ ಆಟಗಾರ ಅಹ್ಮೆತ್‌ ಎಯುಪ್‌ ಟರ್ಕಸ್ಲಾನ್‌ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಟರ್ಕಿ ಫುಟ್‌ಬಾಲ್‌ ಕ್ಲಬ್‌ ಅಧಿಕೃತವಾಗಿ ಟ್ವೀಟ್‌ ಮಾಡಿ ಖಚಿತಪಡಿಸಿದೆ.

ಅಹ್ಮೆತ್‌ ಎಯುಪ್‌ ಅವರು ಟರ್ಕಿಯ ಸೆಕೆಂಡ್‌ ಡಿವಿಷನ್ ಕ್ಲಬ್‌ ಯೆನಿ ಮಲಾತ್ಯಸ್ಪರ್‌ನ ಗೋಲ್‌ಕೀಪರ್‌ ಆಗಿದ್ದರು.

ADVERTISEMENT

ಅವರ ನಿಧನಕ್ಕೆ ಕ್ಲಬ್‌ ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.