ಫುಟ್‌ಬಾಲ್
ಯುಪಿಯಾ (ಅರುಣಾಚಲ ಪ್ರದೇಶ): ಈಗಾಗಲೇ ಸ್ಯಾಫ್ 19 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿಕೊಂಡಿರುವ ಭಾರತ ತಂಡ, ಮಂಗಳವಾರ ನೇಪಾಳ ತಂಡವನ್ನು ಎದುರಿಸಲಿದೆ. ಈ ಪಂದ್ಯ ಗೆದ್ದು ಗುಂಪಿನಲ್ಲಿ ಅಗ್ರಸ್ಥಾನ ಗಳಿಸುವ ಗುರಿ ಹೊಂದಿದೆ.
ಭಾರತ ಕಳೆದ ವಾರ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8–0 ಗೋಲುಗಳಿಂದ ಸೋಲಿಸಿತ್ತು. ಭಾನವಾರ ನೇಪಾಳ ತಂಡವು 5–0 ಯಿಂದ ಶ್ರೀಲಂಕಾ ತಂಡವನ್ನು ಸೋಲಿಸಿತ್ತು. ಹೀಗಾಗಿ ಗುಂಪಿನಿಂದ ಭಾರತ ಮತ್ತು ನೇಪಾಳ ಸೆಮಿಫೈನಲ್ ತಲುಪುವುದು ಖಚಿತವಾಗಿತ್ತು.
ನೇಪಾಳ ವಿರುದ್ಧ ಪಂದ್ಯ ಡ್ರಾ ಮಾಡಿಕೊಂಡರೂ ಭಾರತ ಅಗ್ರಸ್ಥಾನ ಗಳಿಸಬಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.