ADVERTISEMENT

ಒಂದೇ ಫುಟ್‌ಬಾಲ್‌ ಕ್ಲಬ್‌ನ 25 ಮಂದಿಗೆ ಸೋಂಕು

ಏಜೆನ್ಸೀಸ್
Published 3 ಜೂನ್ 2020, 19:30 IST
Last Updated 3 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಉಕ್ರೇನಿನ ಫುಟ್‌ಬಾಲ್‌ ಕ್ಲಬ್‌ವೊಂದರ ಸಿಬ್ಬಂದಿ ಹಾಗೂ ಆಟಗಾರರು ಸೇರಿ 25 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ.

‘ಕರ್ಪಾಟಿ ಎಲ್‌ವಿವ್‌ ಕ್ಲಬ್‌ನ 65 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ 25 ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ’ ಎಂದು ಉಕ್ರೇನ್‌ ಫುಟ್‌ಬಾಲ್‌ ಅಸೋಸಿಯೇಷನ್‌ ತಿಳಿಸಿದೆ. ಹೋದ ವಾರ ಕರ್ಪಾಟಿ ತಂಡವನ್ನು ಹೊರಗಿಟ್ಟು ಲೀಗ್‌ ಆರಂಭಿಸಲಾಗಿತ್ತು.

ಉಕ್ರೇನಿಯನ್‌ ಲೀಗ್‌ನ ಎರಡು ಪಂದ್ಯಗಳನ್ನು ಮುಂದೂಡಲಾಗಿದೆ.

ADVERTISEMENT

‘ಸೋಂಕು ದೃಢಪಟ್ಟ ಪ್ರತಿಯೊಬ್ಬರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗುವುದು. ಎರಡು ವಾರಗಳ ಕಾಲತಂಡಕ್ಕೆ ತರಬೇತಿ ಇರುವುದಿಲ್ಲ’ ಎಂದು ಕರ್ಪಾಟಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.