ADVERTISEMENT

FIFA world Cup Football 2022: ಉದ್ಘಾಟನಾ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 10:17 IST
Last Updated 20 ನವೆಂಬರ್ 2022, 10:17 IST
 ಫುಟ್‌ಬಾಲ್ ವಿಶ್ವಕಪ್ ಬೆಂಬಲವಾಗಿ ಕೊಲ್ಕತ್ತದಲ್ಲಿ ಬಾಲಕನೊಬ್ಬ ಫುಟ್‌ಬಾಲ್‌ನೊಂದಿಗೆ ಆಟವಾಡಿದ್ದು ಹೀಗೆ,– ಪಿಟಿಐ ಚಿತ್ರ
 ಫುಟ್‌ಬಾಲ್ ವಿಶ್ವಕಪ್ ಬೆಂಬಲವಾಗಿ ಕೊಲ್ಕತ್ತದಲ್ಲಿ ಬಾಲಕನೊಬ್ಬ ಫುಟ್‌ಬಾಲ್‌ನೊಂದಿಗೆ ಆಟವಾಡಿದ್ದು ಹೀಗೆ,– ಪಿಟಿಐ ಚಿತ್ರ   

ಕತಾರ್: ಫಿಪಾ ಫುಟ್‌ಬಾಲ್ ವಿಶ್ವಕಪ್ 2022 ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಇಂದು ಕತಾರ್‌ನ ಆಲ್‌ಬೆತ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಉದ್ಘಾಟನೆಯಾಗಲಿದೆ.

ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆಫುಟ್‌ಬಾಲ್ ವಿಶ್ವಕಪ್ ಉದ್ಘಾಟನೆಯಾಗಲಿದ್ದು, ಜೋರು ಸಿದ್ದತೆ ನಡೆದಿದೆ. ಉದ್ಘಾಟನೆ ಪಂದ್ಯದಲ್ಲಿ ಆಥಿತೇಯ ಕತಾರ್‌ ಈಕ್ವೆಡಾರ್ ಪಂದ್ಯ ನಡೆಯಲಿದೆ.

ಇನ್ನುಫುಟ್‌ಬಾಲ್ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತೆರಳಿದ್ದು, ಮೊದಲ ಪಂದ್ಯವನ್ನು ಅವರು ವೀಕ್ಷಿಸಲಿದ್ದಾರೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಈಗಾಗಲೇ ಅವರು ಕತಾರ್‌ಗೆ ತೆರಳಿದ್ದಾರೆ.

ADVERTISEMENT

ಎರಡು ದಿನದ ಕಾರ್ಯಕ್ರಮದಲ್ಲಿ ಅವರು ಕತಾರ್‌ನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಫುಟ್‌ಬಾಲ್‌ ಪ್ರೇಮಿಗಳ ಮನಸ್ಸು ಇನ್ನೊಂದು ತಿಂಗಳು ಚೆಂಡಿನ ಸುತ್ತಲೇ ಗಿರಕಿ ಹೊಡೆಯಲಿದೆ. ಕತಾರ್‌ನ ರಾಜಧಾನಿ ದೋಹಾದ ಎಂಟು ಕ್ರೀಡಾಂಗಣಗಳ ಹಸಿರು ಹಾಸಿನಲ್ಲಿ ಮೂಡಿ ಬರಲಿರುವ ಕಾ‌ಲ್ಚೆಂಡಿನಾಟದ ಸೊಬಗು ಸವಿಯಲು ಇಡೀ ಜಗತ್ತು ಕಾತರವಾಗಿದೆ.

ಜಗತ್ತಿನ ಜನಪ್ರಿಯ ಕ್ರೀಡೆಯ ಅತಿದೊಡ್ಡ ಹಬ್ಬದ ಆತಿಥ್ಯಕ್ಕೆ ಅರಬ್‌ ನಾಡಿನ ಪುಟ್ಟ ರಾಷ್ಟ್ರ ಕತಾರ್‌ ಸಜ್ಜಾಗಿದೆ. ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಬರುವ ಫಿಫಾ ವಿಶ್ವಕಪ್‌ ಟೂರ್ನಿ, ಫುಟ್‌ಬಾಲ್‌ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ವಿವಿಧ ದೇಶಗಳ ಖ್ಯಾತ ತಾರೆಯರು ಕ್ಲಬ್‌ ಫುಟ್‌ಬಾಲ್‌ಗೆ ಅಲ್ಪ ವಿರಾಮವನ್ನಿತ್ತು ಕತಾರ್‌ನ ದೋಹಾಕ್ಕೆ ಬಂದಿದ್ದಾರೆ. ನ.20 ರಿಂದ ಡಿ.18ರ ವರೆಗೆ ನಡೆಯಲಿರುವ ಟೂರ್ನಿಯು ಫಿಫಾ ವಿಶ್ವಕಪ್‌ನ 22ನೇ ಟೂರ್ನಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.