ADVERTISEMENT

ಮುಷ್ಕರದತ್ತ ಸ್ಪೇನ್ ಫುಟ್‌ಬಾಲ್ ಆಟಗಾರ್ತಿಯರು

ಏಜೆನ್ಸೀಸ್
Published 23 ಅಕ್ಟೋಬರ್ 2019, 16:24 IST
Last Updated 23 ಅಕ್ಟೋಬರ್ 2019, 16:24 IST

ಮ್ಯಾಡ್ರಿಡ್: ಸ್ಪೇನ್‌ನ ವಿವಿಧ ಭಾಗಗಳ ಮೊದಲ ಡಿವಿಷನ್ ಫುಟ್‌ಬಾಲ್ ಆಟಗಾರ್ತಿಯರು ವೇತನ ಮತ್ತು ಇತರ ಸೌಲಭ್ಯಗಳಿಗೆ ಆಗ್ರಹಿಸಿದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಕುರಿತು ಮಂಗಳವಾರ ನಡೆದ ಸಭೆಯಲ್ಲಿ 200ಕ್ಕೂ ಹೆಚ್ಚು ಮಂದಿ ಮುಷ್ಕರದ ಪರವಾಗಿ ಮತ ಚಲಾಯಿಸಿದ್ದಾರೆ.

ಅಸೋಸಿಯೇಷನ್ ಆಫ್‌ ವಿಮೆನ್ ಫುಟ್‌ಬಾಲ್ ಕ್ಲಬ್ಸ್‌ನ 16 ಕ್ಲಬ್‌ಗಳ ಆಟಗಾರ್ತಿಯರ ಜೊತೆ ಒಂದು ವರ್ಷದಿಂದ ಸಂಧಾನ ನಡೆಯುತ್ತಿದೆ. ಆದರೆ ಇದಕ್ಕೆ ಫಲ ಸಿಗಲಿಲ್ಲ. ಹೀಗಾಗಿ ಮಂಗಳವಾರ ಸಭೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT