ಫುಟ್ಬಾಲ್
ಬೆಂಗಳೂರು: ಕಿಕ್‌ಸ್ಟಾರ್ಟ್ ಎಫ್‌ಸಿ ತಂಡ 15 ವರ್ಷದೊಳಗಿನವರ ಟೈಯರ್ 1ರ ಯೂತ್ ಪ್ರಿಮೀಯರ್ ಲೀಗ್‌ನಲ್ಲಿ ಭಾನುವಾರ ಸಾಮುರಾಯ್ ತಂಡದ ವಿರುದ್ಧ 6–0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.
ಅಶೋಕ ನಗರದ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್ ಎಫ್‌ಸಿ ತಂಡದ ಕಬೈಯಾನ್ಶ್ ರಾಯ್ (7ನೇ, 62ನೇ ನಿ.), ಶ್ಯಾಮ್ ಶೀಹಾನ್ ಕ್ರಿಸ್ಟಿ (19ನೇ ನಿ.), ತೇಜಸ್ (39ನೇ ನಿ.), ವಂಶಿ (69ನೇ ನಿ.) ಮತ್ತು ಪವೀಶ್ ಕುಮಾರ್ (79ನೇ ನಿ.) ಗೋಲು ಗಳಿಸಿದರು.
ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯಂಗ್ ಬ್ಲೂ ಎಲೈಟ್ ಎಫ್‌ಸಿ ತಂಡ 3–0 ಗೋಲುಗಳಿಂದ ಸೌತ್ ಯುನೈಟೆಡ್ ಎಫ್‌ಸಿ ತಂಡವನ್ನು ಮಣಿಸಿತು. ಯಂಗ್ ಬ್ಲೂ ತಂಡದ ವಿವಾನ್ ಅಗರ್‌ವಾಲ್ (25ನೇ ನಿ.), ಅಂಕೀತ್ ನಂಭಿಯಾರ್ (54ನೇ ನಿ.), ಆದಿತ್ಯ ವರ್ಧನ್ ಜ್ಹಾ (72ನೇ ನಿ.) ಚೆಂಡನ್ನು ಗುರಿ ಸೇರಿಸಿದರು.
ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ಬಿಬಿಎಫ್‌ಎಸ್ ಬೆಂಗಳೂರು ತಂಡ 5–2 ಗೋಲುಗಳಿಂದ ರೂಟ್ಸ್ ಎಫ್‌ಸಿ ತಂಡವನ್ನು ಸೋಲಿಸಿತು. ಬಿಬಿಎಫ್‌ಎಸ್ ತಂಡದ ನಿಶಾದ್ ನ್ಹೋ ಮಾಲಾಖರ್ (3ನೇ ನಿ.), ಅಜೋಲ್ಬಿನ್ ಖಾರಿಜಿಲಿಯಾಂಗ್ (9ನೇ, 57ನೇ ನಿ.), ವಿವಾನ್ ಎಸ್. ತೆಗ್ಗಿನ್‌ಮಾಣಿ (36ನೇ ನಿ.), ಸ್ನೇಹಿತ್ ಸುರೇಶ್ (73ನೇ ನಿ.) ಗೋಲು ಹೊಡೆದರು.
ರೂಟ್ಸ್ ತಂಡದ ಅಗ್ರಿಮ್ ಆಯನ್ ಭಟ್ಟಚಾರ್ಯ (15ನೃ ನಿ.) ಮತ್ತು ಹೇಮಂತ್ ಎ. (72ನೆ ನಿ.) ಗೋಲು ಗಳಿಸಿದರು.
ನಾಲ್ಕನೆ ಕ್ವಾರ್ಟರ್ ಫೈನಲ್‌ನಲ್ಲಿ ಆಲ್ಕಮಿ ಐಎಫ್‌ಎ ಇಗ್ನಿಸ್ ತಂಡ 8–0 ಗೋಲುಗಳಿಂದ ರಾಮನ್ ಸ್ಪೋಟ್ಸ್‌ರ್ ಅಕಾಡೆಮಿ ತಂಡವನ್ನು ಸೋಲಿಸಿತು.ಆಲ್ಕಮಿ ತಂಡದ ಉಮೆರ್ ಸೋಫ್ನೊನ್ (14ನೇ, 31ನೇ ನಿ.), ಧಾನಿನ್ ಕಾಥಿರ್‌ಸಾನ್ (34ನೇ ನಿ.), ಎಂ.ಡಿ. ಮುಷಾ (49ನೇ, 65ನೇನಿ.), ಮೆಹುಲ್ ಭಟ್‌ನಗರ್ (54ನೇ ನಿ. 60ನೇನಿ.) ಮತ್ತು ಸಹನ್ಯ ಸೂದ್ (67ನೇ ನಿ.) ಗೋಲು ಬಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.