ಪ್ಯಾರಿಸ್: ಫ್ರಾನ್ಸ್ ಗಣರಾಜ್ಯದ ಸಂಕೇತವಾದ 'ಫ್ರಿಜಿಯನ್ ಕ್ಯಾಪ್' (ಫ್ರಿಜಿಯನ್ ಟೋಪಿ) ಅನ್ನು 2024 ಪ್ಯಾರಿಸ್ ಒಲಿಂಪಿಕ್ಸ್‌ನ ಅಧಿಕೃತ ಲಾಂಛನವಾಗಿ (ಮ್ಯಾಸ್ಕಟ್) ಅಂತಿಮಗೊಳಿಸಲಾಗಿದೆ.
ಕ್ರೀಡೆಗೆಎಲ್ಲವನ್ನೂ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸಮಾಜದಲ್ಲಿ ಪ್ರಮುಖ ಸ್ಥಾನ ಹೊಂದಲು ಅರ್ಹವಾಗಿದೆ ಎಂಬುದನ್ನು ಬಿಂಬಿಸುವ ಗುರಿಯನ್ನು ಫ್ರಿಜಿಯನ್ ಕ್ಯಾಪ್ ಹೊಂದಿದೆ ಎಂದು ಪ್ಯಾರಿಸ್ 2024 ಒಲಿಂಪಿಕ್ಸ್‌ನ ಬ್ರ್ಯಾಂಡ್ ನಿರ್ದೇಶಕ ಜೂಲಿ ಮ್ಯಾಟಿಖಿನ್ ಹೇಳಿದ್ದಾರೆ.
ಫ್ರೆಂಚ್ ಕ್ರಾಂತಿಯ ಸ್ಪೂರ್ತಿಯನ್ನು ಫ್ರಿಜಿಯನ್ ಟೋಪಿ ಎತ್ತಿ ಹಿಡಿಯಲಿದೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಿಂದ ಆರಂಭವಾಗಿ ಆಗಸ್ಟ್ 11ರ ವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.