ADVERTISEMENT

3X3 ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಮಿಶ್ರ ಫಲ

ಪಿಟಿಐ
Published 25 ಸೆಪ್ಟೆಂಬರ್ 2023, 13:21 IST
Last Updated 25 ಸೆಪ್ಟೆಂಬರ್ 2023, 13:21 IST
ಬ್ಯಾಸ್ಕೆಟ್‌ಬಾಲ್‌
ಬ್ಯಾಸ್ಕೆಟ್‌ಬಾಲ್‌   

ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದ 3X3 ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಭಾರತಕ್ಕೆ ಸೋಮವಾರ ಮಿಶ್ರ ಫಲ ದೊರೆಯಿತು.

ಪುರುಷರ ತಂಡದವರು ಮಲೇಷ್ಯಾ ವಿರುದ್ಧ ಗೆದ್ದರೆ, ಮಹಿಳೆಯರು ಉಜ್ಬೆಕಿಸ್ತಾನ ಕೈಯಲ್ಲಿ ಪರಾಭವಗೊಂಡರು.

ಪುರುಷರ ವಿಭಾಗದ ‘ಸಿ’ ಗುಂಪಿನ ಪಂದ್ಯದಲ್ಲಿ ಸಹಜ್‌ ಪ್ರತಾಪ್‌ ಸಿಂಗ್ (10 ಪಾಯಿಂಟ್ಸ್‌) ಅವರ ಉತ್ತಮ ಆಟದ ನೆರವಿನಿಂದ ಭಾರತ, 20–16 ರಿಂದ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಬುಧವಾರ ಮಕಾವ್‌ ವಿರುದ್ಧ ಪೈಪೋಟಿ ನಡೆಸಲಿದೆ.

ADVERTISEMENT

ಮಹಿಳೆಯರ ವಿಭಾಗದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ, 14–19 ರಿಂದ ಉಜ್ಬೆಕಿಸ್ತಾನಕ್ಕೆ ತಲೆಬಾಗಿತು. ಫರಾನಿಜ್ ಜಲಿಯೊವಾ ಮತ್ತು ಅನಸ್ತೇಸಿಯಾ ಸೊಯ್‌ ಅವರು ಎದುರಾಳಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ತಂಡದ ವೈಷ್ಣವಿ 9 ಪಾಯಿಂಟ್ಸ್‌ ಕಲೆಹಾಕಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.