ADVERTISEMENT

ಜುಲೈ 28ರಿಂದ ಚೆಸ್‌ ಒಲಿಂಪಿಯಾಡ್‌

ಪಿಟಿಐ
Published 25 ಮಾರ್ಚ್ 2022, 13:10 IST
Last Updated 25 ಮಾರ್ಚ್ 2022, 13:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: 44ನೇ ಚೆಸ್‌ ಒಲಿಂಪಿಯಾಡ್‌ ಜುಲೈ 28ರಿಂದ ಆಗಸ್ಟ್ 10ರವರೆಗೆ ಇಲ್ಲಿ ನಡೆಯಲಿದೆ ಎಂದು ವಿಶ್ವ ಚೆಸ್ ಆಡಳಿತ ಮಂಡಳಿ (ಫಿಡೆ) ತಿಳಿಸಿದೆ.

‘44ನೇ ಚೆಸ್ ಒಲಿಂಪಿಯಾಡ್‌ಅನ್ನು ಅಖಿಲ ಭಾರತ ಚೆಸ್ ಫೆಡರೇಷನ್‌ ಜುಲೈ 28ರಿಂದ ಆಗಸ್ಟ್ 10ರವರೆಗೆ ಚೆನ್ನೈನಲ್ಲಿ ಆಯೋಜಿಸಲು ನಿರ್ಧರಿಸಿದೆ’ ಎಂದು ಫಿಡೆ ಹೇಳಿದೆ. ಅಲ್ಲದೆ, ಜುಲೈ 31ರಿಂದ ಆಗಸ್ಟ್ 9ರವರೆಗೆ ಅಖಿಲ ಭಾರತ ಚೆಸ್ ಫೆಡರೇಷನ್‌ ಚೆನ್ನೈನಲ್ಲಿ 94ನೇ ಫಿಡೆ ಅಧಿವೇಶನವನ್ನು ಆಯೋಜಿಸಲಿದೆ. ಆಗಸ್ಟ್ 7ಅನ್ನು ಫಿಡೆ ಚುನಾವಣೆಗೆ ದಿನಾಂಕವಾಗಿ ಅನುಮೋದಿಸಲು ನಿರ್ಧರಿಸಲಾಯಿತು.

ಈ ಮೊದಲು ಮಾಸ್ಕೊದಲ್ಲಿ ನಿಗದಿಯಾಗಿದ್ದ ಟೂರ್ನಿಯನ್ನು ಉಕ್ರೇನ್‌ ಮೇಲೆ ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲಾಗಿತ್ತು.

ADVERTISEMENT

2013ರಲ್ಲಿ ವಿಶ್ವಚಾಂಪಿಯನ್‌ಷಿಪ್ ಬಳಿಕ ಮೊದಲ ಬಾರಿ ಜಾಗತಿಕ ಮಟ್ಟದಚೆಸ್‌ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.