ADVERTISEMENT

ಹಾಕಿ: ನವೀನ್ ಕ್ಲಬ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 21:28 IST
Last Updated 18 ಜೂನ್ 2025, 21:28 IST
ಹಾಕಿ
ಹಾಕಿ   

ಬೆಂಗಳೂರು: ನವೀನ್ ಹಾಕಿ ಕ್ಲಬ್ ತಂಡವು ಇಲ್ಲಿ ನಡೆಯುತ್ತಿರುವ 94ನೇ ತಿರುವಾಂಕೂರ್ ಕಪ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ಬುಧವಾರ  ನಡೆದ ಪಂದ್ಯದಲ್ಲಿ ನವೀನ್ ಹಾಕಿ ಕ್ಲಬ್ ತಂಡವು 10–1ರಿಂದ ಸದರ್ನ್ ಅಲ್ಫಾ ಸ್ಪೋರ್ಟ್ಸ್‌ ವಿರುದ್ಧ ಜಯಿಸಿತು.  ನವೀನ್ ತಂಡದ ಭರತ್ ಕುಮಾರ್ (3ನಿ,24ನಿ) ಬೆಳ್ಳಿಯಪ್ಪ (12ನಿ, 13ನಿ, 14ನಿ), ವಿವೇಕ್ (8ನಿ, 10ನಿ), ಆಕಾಶ್ (17ನಿ) ಮತ್ತು ಆಶಿಕ್ (18ನಿ, 45ನಿ) ಗೋಲು ಹೊಡೆದರು.  ಅಲ್ಫಾ ತಂಡದ ಸೋಮಣ್ಣ ಅವರು 22ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.  

ಇನ್ನೊಂದು ಪಂದ್ಯದಲ್ಲಿ ಡೆಲ್ಲಿ ಪಬ್ಲಿಕ್ ಶಾಲೆಯು 5–0ಯಿಂದ ಸಮಂತ್ ಸ್ಪೋರ್ಟ್ಸ್ ಅಕಾಡೆಮಿ ವಿರುದ್ಧ ಜಯಿಸಿತು. 

ADVERTISEMENT

ಡೆಲ್ಲಿ ಪಬ್ಲಿಕ್ ತಂಡದ ಶಹಾನುಲ್ ಶಫಾಸ್ (3ನೇ ನಿಮಿಷ), ರಾಹುಲ್ ಬಾಲನ್ ಸಿ.ಪಿ (4ನಿ), ಮೊಹಮ್ಮದ್ ಸಿಯಾಸ್ ಕೆ (13ನಿ) ಮತ್ತು ರತೀಶ್ (41ನಿ, 46ನಿ) ಅವರು ಗೋಲು ಗಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.