ADVERTISEMENT

‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌: ಬ್ಯಾಂಕ್ ಆಫ್ ಬರೋಡಾಗೆ ಜಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 19:31 IST
Last Updated 29 ಜುಲೈ 2021, 19:31 IST
ಮಂಗಳೂರು ಬಿಸಿ ತಂಡದ ಅಶೋಕ ಬಂಡಾ (ಬಲ) ಹಾಗೂ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ತಂಡದ ಸಚಿನ್ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ
ಮಂಗಳೂರು ಬಿಸಿ ತಂಡದ ಅಶೋಕ ಬಂಡಾ (ಬಲ) ಹಾಗೂ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ತಂಡದ ಸಚಿನ್ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಮುಫೀಜ್ ಗಳಿಸಿದ 29 ಪಾಯಿಂಟ್ಸ್ ನೆರವಿನಿಂದ ಬ್ಯಾಂಕ್ ಆಫ್ ಬರೋಡಾ ತಂಡವು ಪ್ರೊ. ಪರಪ್ಪ ಸ್ಮಾರಕ ಟ್ರೋಫಿ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 64–30ರಿಂದ ರೈಸಿಂಗ್ ಸ್ಟಾರ್ ಮೈಸೂರು ತಂಡವನ್ನು ಸೋಲಿಸಿತು.

ಮತ್ತೊಂದು ಪಂದ್ಯದಲ್ಲಿ ಮಂಗಳೂರು ಬಿಸಿ ತಂಡವು 63–32ರಿಂದ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ವಿರುದ್ಧ ಗೆಲುವು ಸಾಧಿಸಿತು.

ಎಂ.ಸಿ.ಶ್ರೀನಿವಾಸ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ‘ಬಿ’ ಡಿವಿಷನ್‌ ಲೀಗ್‌ನಲ್ಲಿ ಕೆಎಸ್‌ಪಿ ತಂಡವು 84–52ರಿಂದ ಕನಕ ಕೋಲಾರ ಎದುರು, ಎಂ.ಎನ್‌.ಕೆ.ರಾವ್ ಪಾರ್ಕ್ ಬಿಸಿ 83–54ರಿಂದ ಬಾಶ್ ವಿರುದ್ಧ, ಪ್ರೊಟೆಕ್‌ ಅಸೋಸಿಯೇಷನ್ ಮೈಸೂರು ತಂಡವು 66–51ರಿಂದ ರೋವರ್ಸ್ ಧಾರವಾಡ ಎದುರು, ಎಂಇಜಿ ತಂಡವು 69–31ರಿಂದ ಕೋರಮಂಗಲ ಎಸ್‌ಸಿ ವಿರುದ್ಧ ಜಯ ಗಳಿಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.