ADVERTISEMENT

ಅಭಿನವ್, ವೇದಾಲಕ್ಷ್ಮಿಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:12 IST
Last Updated 12 ಜೂನ್ 2025, 16:12 IST
ವೇದಾಲಕ್ಷ್ಮಿ ಡಿ.ಕೆ. ಮತ್ತು ಅಭಿನವ್ ಕೆ.ಮೂರ್ತಿ
ವೇದಾಲಕ್ಷ್ಮಿ ಡಿ.ಕೆ. ಮತ್ತು ಅಭಿನವ್ ಕೆ.ಮೂರ್ತಿ   

ಬೆಂಗಳೂರು: ಅಭಿನವ್ ಕೆ.ಮೂರ್ತಿ ಅವರು ತೀವ್ರ ಹೋರಾಟದ ಪಂದ್ಯದಲ್ಲಿ ವಿಭಾಸ್‌ ವಿ.ಜಿ ಅವರನ್ನು ಸೋಲಿಸಿ ಕರ್ನಾಟಕ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಗುರುವಾರ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ವೇದಾಲಕ್ಷ್ಮಿ ಡಿ.ಕೆ. ಅವರ ಪಾಲಾಯಿತು.

19 ವರ್ಷದೊಳಗಿನವ ಸಿಂಗಲ್ಸ್‌ನಲ್ಲಿ ಬುಧವಾರ ಚಾಂಪಿಯನ್ ಆಗಿದ್ದ ಅಭಿನವ್, ವಿ.ವಿ.ಪುರಂನ ಮ್ಯಾಚ್‌ ಪಾಯಿಂಟ್‌ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಪುರುಷರ ಸಿಂಗಲ್ಸ್  ಫೈನಲ್‌ನಲ್ಲಿ ವಿಭಾಸ್‌ ಅವರನ್ನು 9–11, 11–7, 9–11, 9–11, 11–9, 11–7, 13–11 ರಿಂದ ಸೋಲಿಸಿದರು.

ಸೆಮಿಫೈನಲ್‌ನಲ್ಲಿ ಪಂದ್ಯಗಳಲ್ಲಿ ವಿಭಾಸ್ 11–7, 10–12, 6–11, 11–7, 7–11, 11–7, 13–11 ರಿಂದ ಆಕಾಶ್‌ ಕೆ.ಜೆ. ಅವರನ್ನು ಸೋಲಿಸಿದರೆ, ಅಭಿನವ್ 11–5, 11–5, 11–9, 11–7 ರಿಂದ ಕೆ.ಕಲೈವಣ್ಣನ್ ಅವರನ್ನು ಹಿಮ್ಮೆಟ್ಟಿಸಿದರು.

ADVERTISEMENT

ಮಹಿಳೆಯ ಸಿಂಗಲ್ಸ್ ಫೈನಲ್‌ನಲ್ಲಿ ವೇದಾಲಕ್ಷ್ಮಿ 9–11, 14–12, 12–10, 11–5, 11–9 ರಿಂದ ಖುಷಿ ಅವರನ್ನು ಸೋಲಿಸಿದರು.

ಸೆಮಿಫೈನಲ್ ಪಂದ್ಯಗಳಲ್ಲಿ ವೇದಾಲಕ್ಷ್ಮಿ 11–7, 7–11, 11–9, 3–11, 11–4, 11–5 ರಿಂದ ಹಿಮಾನ್ಶಿ ಚೌಧರಿ ವಿರುದ್ಧ; ಖುಷಿ 8–11, 10–12, 6–11, 11–9, 12–10, 11–9, 11–8 ರಿಂದ ನೀತಿ ಅಗರವಾಲ್ ವಿರುದ್ಧ ಜಯಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.