
ಪ್ರಜಾವಾಣಿ ವಾರ್ತೆ
ಭುವನೇಶ್ವರ: ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸಂಸ್ಥಾಪಕ ಡಾ. ಅಚ್ಯುತ ಸಾಮಂತ ಅವರು ಭಾರತೀಯ ವಾಲಿಬಾಲ್ ಫೆಡರೇಶನ್‌ನ (ವಿಎಫ್‌ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ವಾರಾಣಸಿಯಲ್ಲಿ ಸೋಮವಾರ 72ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್ ಉದ್ಘಾಟನೆಗೆ ಮೊದಲು ನಡೆದ ಫೆಡರೇಷನ್‌ನ ವಾರ್ಷಿಕ ಮಂಡಳಿ ಸಭೆಯಲ್ಲಿ ಡಾ.ಸಮಂತ ಅವರ ಆಯ್ಕೆ ನಡೆದಿದೆ. ಅವರು ನಾಲ್ಕು ವರ್ಷಗಳ ಅವಧಿ ಹೊಂದಿದ್ದಾರೆ.
ಈ ಚಾಂಪಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದರು.
ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ (ಕೆಐಐಟಿ) ರಾಷ್ಟ್ರೀಯ ಯುವ ವಾಲಿಬಾಲ್ ಚಾಂಪಿಯನ್‌ಷಿಪ್ ಅನ್ನು ಆಯೋಜಿಸಲು ಜನರಲ್ ಕೌನ್ಸಿಲ್ ಇದೇ ವೇಳೆ ಅನುಮೋದನೆ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.