ADVERTISEMENT

ಬ್ಯಾಡ್ಮಿಂಟನ್‌: ಸೆಮಿಗೆ ಲಕ್ಷ್ಯ ಸೇನ್‌

ಪಿಟಿಐ
Published 30 ನವೆಂಬರ್ 2018, 20:01 IST
Last Updated 30 ನವೆಂಬರ್ 2018, 20:01 IST

ಮುಂಬೈ: ಎರಡನೇ ಶ್ರೇಯಾಂಕದ ಆಟಗಾರ ಲಕ್ಷ್ಯ ಸೇನ್‌ ಅವರು ಟಾಟಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಲಕ್ಷ್ಯ 21–17, 21–10ರಲ್ಲಿ ಮಲೇಷ್ಯಾದ ಗೊಹ್‌ ಜಿಯಾಪ್‌ ಚಿನ್‌ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಅಸ್ಮಿತಾ ಚಾಲಿಹಾ 21–15, 21–19ರಲ್ಲಿ ರೇವತಿ ಎದುರು ಗೆದ್ದರು.

ADVERTISEMENT

ಇತರ ಪಂದ್ಯಗಳಲ್ಲಿ ಮುಗ್ದಾ ಅಗ್ರೇಯಾ 23–21, 21–17ರಲ್ಲಿ ರೇಷ್ಮಾ ಕಾರ್ತಿಕ್‌ ಎದುರೂ, ವೃಷಾಲಿ ಗುಮ್ಮಾಡಿ 21–18, 21–16ರಲ್ಲಿ ಆಕರ್ಷಿ ಕಶ್ಯಪ್‌ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.