ADVERTISEMENT

ಶೂಟಿಂಗ್‌: ವಿಶ್ವಕಪ್‌ ರದ್ದುಗೊಳಿಸಲು ಒತ್ತಡ

ಪಿಟಿಐ
Published 2 ಏಪ್ರಿಲ್ 2020, 20:00 IST
Last Updated 2 ಏಪ್ರಿಲ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಮೇ–ಜೂನ್‌ ತಿಂಗಳಲ್ಲಿ ನಿಗದಿಯಾಗಿರುವ ವಿಶ್ವ ಕಪ್‌ ಶೂಟಿಂಗ್‌ ಕೂಟವನ್ನು ಕೊರೊನಾ ಸೋಂಕು ಹಾವಳಿಯ ಕಾರಣ ರದ್ದು ಮಾಡುವಂತೆ ರಾಷ್ಟ್ರೀಯ ರೈಫರ್‌ ಶೂಟಿಂಗ್‌ ಸಂಸ್ಥೆ (ಎನ್‌ಆರ್‌ಎಐ) ಮೇಲೆ ಒತ್ತಡ ಹೆಚ್ಚುತ್ತಿದೆ.

ಕೋವಿಡ್‌–19 ಪಿಡುಗಿನ ಕಾರಣ ಜರ್ಮನಿಯ ಮ್ಯೂನಿಕ್‌ನಲ್ಲಿ ಜೂನ್‌ ಆರಂಭದಲ್ಲಿ ನಡೆಯಬೇಕಾಗಿದ್ದ ವಿಶ್ವಕಪ್‌ ಶೂಟಿಂಗ್‌ ಕೂಟ ರದ್ದುಗೊಂಡಿತ್ತು.

ದೆಹಲಿಯಲ್ಲಿ ಮಾರ್ಚ್‌ 15 ರಿಂದ 26ರವರೆಗೆ ನಡೆಯಬೇಕಾಗಿದ್ದ ಶೂಟಿಂಗ್ ವಿಶ್ವಕಪ್‌ ಅನ್ನು, ಆರಂಭವಾಗಲು ಕೇವಲ ನಾಲ್ಕು ದಿನಗಳಿರುವಾಗ ಮುಂದೂಡಲಾಗಿತ್ತು. ನಂತರ ಇದನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಯಿತು. ಇದರಂತೆ ರೈಫಲ್‌ ಮತ್ತು ಪಿಸ್ತೂಲ್‌ ಸ್ಪರ್ಧೆಗಳು ಮೇ 5 ರಿಂದ 12ರವರೆಗೆ ಮತ್ತು ಶಾಟ್‌ಗನ್‌ ಸ್ಪರ್ಧೆಗಳು ಜೂನ್‌ 2 ರಿಂದ 9 ರವರೆಗೆ ನಡೆಯಬೇಕಾಗಿವೆ.

ADVERTISEMENT

ಕೊರೊನಾ ಸೋಂಕು ವಿಪರೀತವಾದ ಕಾರಣ ಆರೋಗ್ಯ ವ್ಯವಸ್ಥೆಯಲ್ಲಿ ಅಭೂತಪೂರ್ವ ಬಿಕ್ಕಟ್ಟು ತಲೆದೋರಿದೆ. ಹೀಗಾಗಿ ಜರ್ಮನಿಯ ರೀತಿ ಭಾರತ ಕೂಡ ಈ ವಿಶ್ವಕಪ್‌ ರದ್ದುಗೊಳಿಸಬೇಕೆಂದು ಎನ್‌ಆರ್‌ಎಐ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಸಂಸ್ಥೆಯ ನಿಕಟ
ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.