ಪ್ರಾತಿನಿಧಿಕ ಚಿತ್ರ
ಅಮೃತಸರ: ಅತಿಯಾದ ತರಬೇತಿ ಮತ್ತು ಸುಸ್ತಾಗುವುದನ್ನು ತಡೆಯಲು 16 ವರ್ಷದೊಳಗಿನ ಅಥ್ಲೀಟುಗಳು, ಹೆಚ್ಚಿನ ವಯೋವರ್ಗದ ಮತ್ತು ಸೀನಿಯರ್ ಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್‌ಐ) ನಿರ್ಬಂಧಿಸಿದೆ. ಶನಿವಾರ ಆರಂಭವಾದ ವಾರ್ಷಿಕ ಮಹಾಸಭೆಯಲ್ಲಿ ಫೆಡರೇಷನ್ ಈ ನಿರ್ಧಾರ ಕೈಗೊಂಡಿದೆ.
‘16 ವರ್ಷದೊಳಗಿನ ಅಥ್ಲೀಟುಗಳು, 18 ವರ್ಷದೊಳಗಿನ ಮತ್ತು ಸೀನಿಯರ್ ಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸುವಂತಿಲ್ಲ’ ಎಂದು ಎಎಫ್‌ಐ ಪ್ಲಾನಿಂಗ್ ಕಮಿಷನ್ ಅಧ್ಯಕ್ಷ ಲಲಿತ್ ಭಾನೋತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.