ADVERTISEMENT

ಗಾಲ್ಫ್‌: ಅಮನ್ ದೀಪ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 20:00 IST
Last Updated 12 ಜುಲೈ 2019, 20:00 IST
ಅಮನ್‌ ದೀಪ್‌ ಡ್ರಾಲ್
ಅಮನ್‌ ದೀಪ್‌ ಡ್ರಾಲ್   

ಬೆಂಗಳೂರು: ಅಮೋಘ ಆಟವಾಡಿದ ಅಮನ್‌ದೀಪ್ ಡ್ರಾಲ್‌ ಅವರು ಇಲ್ಲಿ ನಡೆದ ಮಹಿಳೆಯರ ಪ್ರೊ ಗಾಲ್ಫ್ ಟೂರ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ಈ ವರ್ಷದ ಮೊದಲ ಪ್ರಶಸ್ತಿ ಬಗಲಿಗೆ ಹಾಕಿಕೊಂಡರು.

ಶುಕ್ರವಾರ ಮುಕ್ತಾಯಗೊಂಡ ಟೂರ್‌ನ ಅಂತಿಮ ಸುತ್ತಿನಲ್ಲಿ ಅಮನ್‌ದೀಪ್ ಅವರಿಗೆ ಸಾಟಿಯಾಗಲು ಯಾರೂ ಇರಲಿಲ್ಲ. ಹೀಗಾಗಿ ಅವರು ಸುಲಭವಾಗಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕೊನೆಯದಾಗಿ ಅವರು 2018ರಲ್ಲಿ ನಡೆದ ಇದೇ ಟೂರ್‌ನ 11ನೇ ಲೆಗ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಕಪುರ್ತಲಾದ ಈ ಆಟಗಾರ್ತಿ ಈ ವರ್ಷದ ಎರಡನೇ ಮತ್ತು ಮೂರನೇ ಲೆಗ್‌ನಲ್ಲಿ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದರು.

ಗೌರಿಕಾ ಬಿಷ್ನೋಯ್ ಕೂಡ ಶುಕ್ರವಾರ ಅಮೋಘ ಸಾಧನೆ ಮಾಡಿದರು. ಆರನೇ ಸ್ಥಾನದಲ್ಲಿ ಅವರು ಅಮೋಘ ಓಟದ ಮೂಲಕ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಮೊದಲ ಸುತ್ತಿನಲ್ಲಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದ ಗುರ್‌ಸಿಮರ್ ಬದ್ವಾಲ್‌ ನಾಲ್ಕನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

ADVERTISEMENT

ಗೌರಿಕಾ ಅವರು ರನ್ನರ್ ಅಪ್ ಆಗಿ ಮೂರನೇ ಬಾರಿ ಈ ಸಾಧನೆ ಮಾಡಿದ ಆಟಗಾರ್ತಿ ಎನಿಸಿಕೊಂಡರು. ಅಫ್ಶಾನ್ ಫಾತಿಮಾ, ಸೋನಮ್ ಚೌ ಮತ್ತು ಅನನ್ಯಾ ದಾತಾರ್ ಕೂಡ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.