ADVERTISEMENT

ಅಂಜುಮ್ ಮೌದ್ಗಿಲ್‌ಗೆ ಬೆಳ್ಳಿ ಪದಕ

ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌: ಪುರುಷರ ತಂಡಕ್ಕೂ ಎರಡನೇ ಸ್ಥಾನ

ಪಿಟಿಐ
Published 3 ಜೂನ್ 2022, 13:21 IST
Last Updated 3 ಜೂನ್ 2022, 13:21 IST
ಅಂಜುಮ್‌ ಮೌದ್ಗಿಲ್– ಸಾಯ್ ಮೀಡಿಯಾ ಟ್ವಿಟರ್‌ ಚಿತ್ರ
ಅಂಜುಮ್‌ ಮೌದ್ಗಿಲ್– ಸಾಯ್ ಮೀಡಿಯಾ ಟ್ವಿಟರ್‌ ಚಿತ್ರ   

ನವದೆಹಲಿ: ಭಾರತದ ಅನುಭವಿ ಶೂಟರ್‌ ಅಂಜುಮ್ ಮೌದ್ಗಿಲ್ ಅವರು ಐಎಸ್‌ಎಸ್‌ಎಫ್‌ಶೂಟಿಂಗ್‌ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ 50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಅವರಿಗೆ ಪದಕ ಒಲಿದಿದೆ. ಪುರುಷರ 3 ಪೋಸಿಷನ್ಸ್‌ನಲ್ಲಿ ಭಾರತ ತಂಡವೂ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿಶುಕ್ರವಾರ ಅಂಜುಮ್‌ 12–16ರಿಂದ ಡೆನ್ಮಾರ್ಕ್‌ನ ರಿಕ್ಕೆ ಮಯಿಂಗ್ ಇಬ್ಸೆನ್ ವಿರುದ್ಧ ಸೋತರು.

ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆಯಾಗಿರುವ ಅಂಜುಮ್‌, ರ‍್ಯಾಂಕಿಂಗ್ ಸುತ್ತಿನಲ್ಲಿ ಗುರುವಾರ 600ರ ಪೈಕಿ 587 ಪಾಯಿಂಟ್ಸ್ ಕಲೆಹಾಕಿದ್ದರು. 60 ಶೂಟರ್‌ಗಳ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು.

ADVERTISEMENT

ಅಂಜುಮ್ ಅವರಿಗೆ ವಿಶ್ವಕಪ್‌ನಲ್ಲಿ ಇದು ಎರಡನೇ ಬೆಳ್ಳಿ ಪದಕವಾಗಿದೆ.

ಇದೇ ಸ್ಪರ್ಧೆಯಲ್ಲಿದ್ದ ಭಾರತದ ಆಯುಷಿ ಪೊದ್ದಾರ್ ಮತ್ತು ಆಶಿ ಚೌಕ್ಸಿ ಕ್ರಮವಾಗಿ 16 ಮತ್ತು 20ನೇ ಸ್ಥಾನ ಗಳಿಸಿದರು.

ಪುರುಷರ 3 ಪೋಸಿಷನ್ಸ್‌ನಲ್ಲಿ ಫೈನಲ್‌ನಲ್ಲಿ ಸ್ವಪ್ನಿಲ್‌, ದೀಪಕ್‌ ಕುಮಾರ್ ಮತ್ತು ಗೋಲ್ಡಿ ಗುರ್ಜರ್ ಅವರಿದ್ದ ತಂಡವು 7–17ರಿಂದ ಕ್ರೊವೇಷ್ಯಾ ಶೂಟರ್‌ಗಳ ಎದುರು ಸೋತಿತು. ಉಕ್ರೇನ್ ತಂಡವು ಕಂಚು ಗೆದ್ದುಕೊಂಡಿತು.

ಸ್ವಪ್ನಿಲ್ ಗುರುವಾರ 50 ಮೀ. ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು.

ಟೂರ್ನಿಯಲ್ಲಿ ಸದ್ಯ ಭಾರತ ಗೆದ್ದ ಪದಕಗಳ ಸಂಖ್ಯೆ ನಾಲ್ಕಕ್ಕೇರಿದೆ. ಅದರಲ್ಲಿ ಒಂದು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಕೊರಿಯಾ ಮತ್ತು ಸರ್ಬಿಯಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.