ADVERTISEMENT

ಶೂಟಿಂಗ್: ಅನುರಾಧಾ ದೇವಿಗೆ ಬೆಳ್ಳಿ

ಪಿಟಿಐ
Published 27 ಜನವರಿ 2024, 13:34 IST
Last Updated 27 ಜನವರಿ 2024, 13:34 IST
<div class="paragraphs"><p>ಶೂಟಿಂಗ್ ( ಸಾಂದರ್ಭಿಕ ಚಿತ್ರ)</p></div>

ಶೂಟಿಂಗ್ ( ಸಾಂದರ್ಭಿಕ ಚಿತ್ರ)

   

ನವದೆಹಲಿ: ಭಾರತದ ಅನುರಾಧಾ ದೇವಿ ಅವರು  ತಮ್ಮ ಪದಾರ್ಪಣೆಯ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದರು.

ಈಜಿಪ್ತ್‌ನ  ಕೈರೊದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಈ ಸಾಧನೆ ಮಾಡಿದರು.

ADVERTISEMENT

33 ವರ್ಷದ ಅನುರಾಧಾ ಅವರು ರಿಯೊ ಒಲಿಂಪಿಕ್ ಚಾಂಪಿಯನ್, ಗ್ರೀಸ್‌ನ ಅನಾ ಕೊರಾಕಾಕಿ ಅವರಿಗೆ ನಿಕಟ ಪೈಪೋಟಿಯೊಡ್ಡಿದರು. ಅನಾ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಒಲಿಂಪಿಕ್ ಕೂಟ ನಡೆಯಲಿರುವ ಈ ವರ್ಷದ ಮೊದಲ ವಿಶ್ವಕಪ್ ಸ್ಪರ್ಧೆ ಇದಾಗಿದೆ.ಇದರಲ್ಲಿ ಮೊದಲ ಪದಕ ಗೆದ್ದುಕೊಡುವಲ್ಲಿ ಅನುರಾಧಾ ಯಶಸ್ವಿಯಾದರು.

ಪುರುಷರ 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಸಾಗರ್ ಡಂಗಿ ಫೈನಲ್ ತಲುಪಿದರು. ಆದರೆ ಆರನೇ ಸ್ಥಾನ ಪಡೆದರು. 

ಪ್ಯಾರಿಸ್ ಕೋಟಾ ಪಡೆದಿರುವ ರಿದಂ ಸಂಗ್ವಾನ್ ಅವರು ಮಹಿಳೆಯರ ವಿಭಾಗದ ಫೈನಲ್ ತಲುಪಿದರು. ಅವರು ಅರ್ಹತಾ ಸುತ್ತಿನಲ್ಲಿ 584 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿದ್ದರು. ಇದೇ ಸುತ್ತಿನಲ್ಲಿ ಅನುರಾಧಾ 575 ಅಂಕಗಳನ್ನು ಗಳಿಸಿದ್ದರು.

ಫೈನಲ್‌ನಲ್ಲಿ ಅನುರಾಧಾ ಅವರು 239.9 ಸ್ಕೋರ್ ಗಳಿಸಿದರು.  ಅವರು ಅನಾ ಕೊಕಾಕೊಕಿ ಅವರಿಂದ ಕೇವಲ 1.2 ಅಂಕ ಹಿನ್ನಡೆಯಲ್ಲಿದ್ದರು.

ಭಾರತದ ಇನ್ನುಳಿದ ಶೂಟರ್‌ಗಳಲ್ಲಿ ಮನು ಭಾಕರ್ ಪಿಸ್ತೂಲ್ ವಿಭಾಗದಲ್ಲಿ 572 ಗಳಿಸಿ 15ನೇ ಸ್ಥಾನ ಪಡೆದರು.

ಪುರುಷರ ಟ್ರ್ಯಾಪ್‌ನಲ್ಲಿ ಜೋರಾವರ್ ಸಂಧು ಅವರು ಮೂರು ಸುತ್ತುಗಳಲ್ಲಿ 70 ಸ್ಕೋರ್ ಮಾಡಿದರು. 15ನೇ ಸ್ಥಾನ ಪಡೆದರು. ಮಹಿಳೆಯರ ಟ್ರ್ಯಾಪ್‌ನಲ್ಲಿ ರಾಜೇಶ್ವರಿ ಕುಮಾರಿ 19ನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.