ವಂಟಾ (ಫಿನ್ಲೆಂಡ್): ಭಾರತದ ಉದಯೋನ್ಮುಖ ಆಟಗಾರ್ತಿ ಅನ್ಮೋಲ್ ಖಾರ್ಬ್ ಅವರು ಆರ್ಕ್ಟಿಕ್ ಓಪ್ ಸೂಪರ್ 500 ಟೂರ್ನಿಯ ಸೆಮಿಫೈನಲ್‌ನಲ್ಲಿ ಮೂರು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಾಗುಚಿ ಎದುರು ಶನಿವಾರ ನೇರ ಗೇಮ್‌ಗಳಿಂದ ಸೋಲನುಭವಿಸಿದರು.
18 ವರ್ಷ ವಯಸ್ಸಿನ ಆಟಗಾರ್ತಿ ಎರಡೂ ಗೇಮ್‌ಗಳ ಆರಂಭದಲ್ಲಿ ಪೈಪೋಟಿ ನೀಡಿದರೂ ಅಂತಿಮವಾಗಿ 10–21, 13–21ರಲ್ಲಿ ಜಪಾನ್‌ನ ಆಟಗಾರ್ತಿ ಎದುರು 29 ನಿಮಿಷಗಳಲ್ಲಿ ಸೋಲನುಭವಿಸಿದರು.
2024ರಲ್ಲಿ ಮೊದಲ ಬಾರಿ ಭಾರತ ಏಷ್ಯಾ ಟೀಮ್ ಚಾಂಪಿಯನ್‌ಷಿಪ್ ಗೆದ್ದ ತಂಡದಲ್ಲಿ ಫರೀದಾಬಾದಿನ ಆಟಗಾರ್ತಿ ಭಾಗಿಯಾಗಿದ್ದ ಅನ್ಮೋಲ್ ಅವರು ಈ ಟೂರ್ನಿಯಲ್ಲಿ ವಿಶ್ವದ ಪ್ರಮುಖ ಆಟಗಾರ್ತಿಯರನ್ನು ಸೋಲಿಸಿ ಉತ್ತಮ ಪ್ರದರ್ಶನ ನೀಡಿದ್ದರು.
ವಿಶ್ವ ಕ್ರಮಾಂಕದಲ್ಲಿ 32ನೇ ಸ್ಥಾನದಲ್ಲಿರುವ ವೆನ್ ಚಿ ಹ್ಸು, 21ನೇ ಸ್ಥಾನದಲ್ಲಿರುವ ಲಿನ್ ಸಿಯಾಂಗ್ ಟಿ ಅವರನ್ನು ಹಿಮ್ಮೆಟ್ಟಿಸಿದ್ದ ಅನ್ಮೋಲ್, ಕ್ವಾರ್ಟರ್‌ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಅಮೇಲಿ ಶುಲ್ಝ್ ಮೇಲೆ ಜಯಗಳಿಸಿ ಮೊತ್ತಮೊದಲ ಬಾರಿ ಸೂಪರ್ 500 ಮಟ್ಟದ ಟೂರ್ನಿಯ ಸೆಮಿಫೈನಲ್ ತಲುಪಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.