ADVERTISEMENT

ಚೆಸ್‌: ರೋನಕ್, ಕಾರ್ತಿಕ್‌ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 20:39 IST
Last Updated 2 ನವೆಂಬರ್ 2025, 20:39 IST
.
.   

ಪಣಜಿ (ಪಿಟಿಐ): ಭಾರತದ ಅನುಭವಿ ಆಟಗಾರ ಸೂರ್ಯಶೇಖರ್‌ ಗಂಗೂಲಿ ಹಾಗೂ ಗ್ರ್ಯಾಂಡ್‌ಮಾಸ್ಟರ್‌ಗಳಾದ ರೋನಕ್ ಸಾಧ್ವಾನಿ ಮತ್ತು ಕಾರ್ತಿಕ‌್ ವೆಂಕಟರಾಮನ್‌ ಅವರು ಭಾನುವಾರ ಗೆಲುವಿನೊಂದಿಗೆ ಫಿಡೆ ಚೆಸ್‌ ವಿಶ್ವಕಪ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು. ಐಎಂ ಅರಣ್ಯಕ್ ಘೋಷ್ ಅವರು ಪೋಲೆಂಡ್‌ನ ಮ್ಯಾಥ್ಯೂಸ್‌ ಬಾರ್ಟೆಲ್ ಅವರಿಗೆ ಆಘಾತ ನೀಡಿದರು.

ಸೂರ್ಯಶೇಖರ್‌ ಅವರು ಅಜರ್‌ಬೈಜಾನ್‌ನ ಅಹಮದ್‌ಝಾದಾ ಅವರನ್ನು ಸುಲಭವಾಗಿ ಮಣಿಸಿದರೆ, ರೋನಕ್‌ ಅವರು ಡೇನಿಯರ್ ಬಾರಿಷ್‌ (ದಕ್ಷಿಣ ಆಫ್ರಿಕಾ) ಎದುರು ನಿರಾಯಾಸ ಗೆಲುವು ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಕಾರ್ತಿಕ್‌ ಅವರು ಕ್ಯೂಬಾದ ರಾಬರ್ಟೊ ಗಾರ್ಸಿಯಾ ಪಂಟೋಜಾ ವಿರುದ್ಧ ಜಯಿಸಿದರು.

ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ ಮಹಿಳಾ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ ಅವರು 0–2ರಿಂದ ಗ್ರೀಸ್‌ನ ಆಟಗಾರ್ತಿ ಸ್ಟಾಮಟಿಸ್‌ ಕೌರ್ಕೊಲಸ್‌ ಅರ್ಡಿಟಿಸ್‌ ಎದುರು ಸೋತು ಅಭಿಯಾನ ಮುಗಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.