ADVERTISEMENT

ಬ್ಯಾಡ್ಮಿಂಟನ್‌: ಇಂಡೊನೇಷ್ಯಾಕ್ಕೆ ಮಣಿದ ಭಾರತ

ಲಕ್ಷ್ಯ ಆಟ ವ್ಯರ್ಥ

ಪಿಟಿಐ
Published 15 ಫೆಬ್ರುವರಿ 2020, 21:07 IST
Last Updated 15 ಫೆಬ್ರುವರಿ 2020, 21:07 IST

ಮನಿಲಾ: ಏಷ್ಯನ್‌ ಗೇಮ್ಸ್‌ ಸ್ವರ್ಣ ಪದಕ ವಿಜೇತ ಆಟಗಾರ ಜೊನಾಥನ್‌ ಕ್ರಿಸ್ಟಿ ಅವರನ್ನು ನೇರ ಆಟಗಳಿಂದ ಸೋಲಿಸಿ ಭಾರತದ ಯುವ ಆಟಗಾರ ಲಕ್ಷ್ಯ ಸೇನ್‌ ಬೆರಗು ಮೂಡಿಸಿದರು. ಆದರೆ ಈ ಅಮೋಘ ಫಲಿತಾಂಶದ ಹೊರತಾಗಿಯೂ ಭಾರತ ಏಷ್ಯನ್‌ ಗೇಮ್ಸ್‌ ಬ್ಯಾಡ್ಮಿಂಟನ್‌ ಟೀಮ್‌ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ನಲ್ಲಿ ಶನಿವಾರ ಇಂಡೊನೇಷ್ಯಾ ಎದುರು 2–3 ಅಂತರದಿಂದ ಸೋಲೊಪ್ಪಿಕೊಂಡಿತು.

ವಿಶ್ವ ಕ್ರಮಾಂಕದಲ್ಲಿ 31ನೇ ಸ್ಥಾನದಲ್ಲಿರುವ ಸೇನ್‌ ಎರಡನೇ ಸಿಂಗಲ್ಸ್‌ನಲ್ಲಿ 21–18, 22–20 ರಿಂದ ಏಳನೇ ಕ್ರಮಾಂಕದ ಕ್ರಿಸ್ಟಿ ಅವರನ್ನು ಸೋಲಿಸಿದರು. ಮೊದಲ ಸಿಂಗಲ್ಸ್‌ನಲ್ಲಿ ಅಂಥೋನಿ ಜಿಂಟಿಂಗ್‌ 21–6ರಲ್ಲಿ ಮೊದಲ ಸೆಟ್‌ ಗೆದ್ದಾಗ ಬಿ.ಸಾಯಿಪ್ರಣೀತ್ ಪಂದ್ಯದಿಂ ನಿವೃತ್ತರಾದರು.

ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌ – ಧ್ರುವ್ ಕಪಿಲ ತೀವ್ರ ಹಣಾಹಣಿಯ ನಂತರ 10–21, 21–13, 21–23ರಲ್ಲಿ ಮೂರು ಬಾರಿಯ ವಿಶ್ವ ಚಾಂಪಿಯನ್‌ ಜೋಡಿಯಾದ ಮೊಹಮ್ಮದ್‌ ಅಹಸಾನ್‌– ಹೆಂಡ್ರ ಸೆಟಿಯವಾನ್‌ ಅವರಿಗೆ ಮಣಿದರು. ವಿಶ್ವ ಎರಡನೇ ಕ್ರಮಾಂಕದ ಈ ಜೋಡಿಯ ಗೆಲುವಿನಿಂದ ಇಂಡೊನೇಷ್ಯಾ 2–1 ಮುನ್ನಡೆ ಪಡೆಯಿತು.

ADVERTISEMENT

ಶುಭಂಕರ್‌ ಡೇ ನಂತರ 21–17, 21–15 ರಿಂದ 2–ನೇ ಕ್ರಮಾಂಕದ ಶೆಸರ್‌ ಹಿರೆನ್‌ ಅವರನ್ನು ಸೋಲಿಸಿ ಅಚ್ಚರಿಯ ಫಲಿತಾಂಶದೊಡನೆ 2–2ರಲ್ಲಿ ಸಮ ಮಾಡಿಕೊಂಡರು.

ನಿರ್ಣಾಯಕ ಡಬಲ್ಸ್‌ನಲ್ಲಿ ವಿಶ್ವದ ಅಗ್ರಮಾನ್ಯ ಜೋಡಿಯಾದ ಮಾರ್ಕಸ್‌ ಫೆರ್ನಾಲ್ಡಿ ಗಿಡಿಯೊನ್– ಕೆವಿನ್‌ ಸಂಜಯ ಸುಕಮುಲ್ಜೊ 21–6, 21–13 ರಿಂದ ಭಾರತದ ಚಿರಾಗ್‌ ಶೆಟ್ಟಿ– ಲಕ್ಷ್ಯ ಸೇನ್‌ ಅವರನ್ನು ಮಣಿಸಿ ಇಂಡೊನೇಷ್ಯಾವನ್ನು ಫೈನಲ್‌ ತಲುಪಿಸಿದರು.

ಭಾರತ ಈ ಕೂಟದಲ್ಲಿ ಕಂಚಿನ ಪದಕ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.