ADVERTISEMENT

ಪದಕ ಬೇಟೆಗೆ ಭಾರತ ಸಜ್ಜು

ಏಷ್ಯನ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ದೋಹಾದಲ್ಲಿ ಆರಂಭ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 20:10 IST
Last Updated 20 ಏಪ್ರಿಲ್ 2019, 20:10 IST
ಭಾರತದ ಹಿಮಾದಾಸ್‌, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ
ಭಾರತದ ಹಿಮಾದಾಸ್‌, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ   

ದೋಹಾ: ಪದಕಗಳನ್ನು ಗೆದ್ದು ಮರಳುವ ಕನಸಿನೊಂದಿಗೆ ಭಾರತದ 51 ಅಥ್ಲೀಟ್‌ಗಳ ತಂಡವು ಭಾನುವಾರ ಇಲ್ಲಿ ಕಣಕ್ಕಿಳಿಯಲಿದೆ.

ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದ ಅಸ್ಸಾಂನ ಹಿಮಾ ದಾಸ್ ಅವರ ಮೇಲೆ ಈ ಬಾರಿ ನಿರೀಕ್ಷೆಯ ಭಾರ ಹೆಚ್ಚಿದೆ. ಮೊದಲ ದಿನವೇ ಹಿಮಾ 400ಮೀ ಓಟದ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿಯ ಚಾಂಪಿಯನ್‌ ಬಹ್ರೇನ್‌ನ ಸಲ್ವಾ ನಾಸೆರ್‌ ಅವರನ್ನು ಹಿಂದಿಕ್ಕಲು ಸಜ್ಜಾಗಿದ್ದಾರೆ. 400 ಮೀಟರ್ಸ್ ಓಟದಲ್ಲಿಜಿನ್ಸನ್ ಜಾನ್ಸನ್‌, ಶಾಟ್‌ಪಟ್‌ನಲ್ಲಿ ತೇಜಿಂದರ್‌ ಪಾಲ್‌ ಸಿಂಗ್ ತೋರ್ ಸ್ಪರ್ಧಿಸಲಿದ್ದಾರೆ.

ಎಂಟು ಚಿನ್ನದ ಪದಕಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಗಳು ಭಾಗವಹಿಸಲಿದ್ದು,ಮಹಿಳೆಯರ ರಿಲೇ ಮತ್ತು 400ಮೀಟರ್ಸ್ ಓಟದ ಸ್ಪರ್ಧೆಯ ಫೈನಲ್‌ ಸಂಜೆ ನಡೆಯಲಿದೆ.

ADVERTISEMENT

ಗಾಯದ ಸಮಸ್ಯೆ: ಕಳೆದ ಬಾರಿ ಪದಕ ಗಳಿಸಿದ್ದ ಅಥ್ಲೀಟ್‌ಗಳಾದ ನೀರಜ್ ಚೋಪ್ರಾ ಧರುಣ್‌ ಅಯ್ಯಸಾಮಿ, ಎಂ.ಶ್ರೀಶಂಕರ್‌, ಮನ್‌ಜಿತ್ ಸಿಂಗ್‌ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.ಅರ್ಪಿಂದರ್‌ ಸಿಂಗ್‌,ಸುಧಾ ಸಿಂಗ್‌, ಗೋವಿಂದನ್‌ ಲಕ್ಷಣ್‌ ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದಾರೆ.

2017ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವು 12 ಚಿನ್ನದ ಪದಕ ಸಹಿತ 29 ಪದಕ ಗೆದ್ದು ಅಗ್ರಸ್ಥಾನ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.