ADVERTISEMENT

ಬಾಕ್ಸಿಂಗ್‌: ಚಿನ್ನ ಗೆದ್ದ ಅಮಿತ್‌, ಪೂಜಾ

ಪಿಟಿಐ
Published 26 ಏಪ್ರಿಲ್ 2019, 20:13 IST
Last Updated 26 ಏಪ್ರಿಲ್ 2019, 20:13 IST
ಅಮಿತ್ ಫಂಗಲ್‌
ಅಮಿತ್ ಫಂಗಲ್‌   

ಬ್ಯಾಂಕಾಕ್‌: ಭಾರತದ ಅಮಿತ್‌ ಫಂಗಲ್ ಮತ್ತು ಪೂಜಾ ರಾಣಿ ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು.

52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಅಮಿತ್‌ ದಕ್ಷಿಣ ಕೊರಿಯಾದ ಕಿಮ್ ಇಂಕ್ಯು ಅವರನ್ನು ಫೈನಲ್‌ನಲ್ಲಿ ಮಣಿಸಿದರು. ಪೂಜಾ ರಾಣಿ 81 ಕೆಜಿ ವಿಭಾಗದ ಫೈನಲ್‌ನಲ್ಲಿ ಚೀನಾದ ವಾಂಗ್ ಲಿನಾ ಎದುರು ಗೆದ್ದರು. ದೀಪಕ್ ಸಿಂಗ್‌, ಕವಿಂದರ್ ಸಿಂಗ್‌, ಆಶಿಶ್‌ ಕುಮಾರ್ ಮತ್ತು ಸಿಮ್ರನ್‌ಜೀಗ್ ಕೌರ್ ಬೆಳ್ಳಿ ಪದಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT