ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಲವ್ಲಿನಾ, ದೀಪಕ್‌

ಏಷ್ಯನ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 20:09 IST
Last Updated 20 ಏಪ್ರಿಲ್ 2019, 20:09 IST
ಭಾರತದ ಶಿವ ಥಾಪ (ಎಡ) ಎದುರಾಳಿ ಬಾಕ್ಸರ್‌ನ ತಲೆಗೆ ಪಂಚ್‌ ಮಾಡಿದರು
ಭಾರತದ ಶಿವ ಥಾಪ (ಎಡ) ಎದುರಾಳಿ ಬಾಕ್ಸರ್‌ನ ತಲೆಗೆ ಪಂಚ್‌ ಮಾಡಿದರು   

ಬ್ಯಾಂಕಾಕ್‌:ಏಷ್ಯನ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಭಾರತದ ಆರು ಬಾಕ್ಸರ್‌ಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಶನಿವಾರ ನಡೆದ ಟೂರ್ನಿಯ 60 ಕೆ.ಜಿ ವಿಭಾಗದಲ್ಲಿ ಶಿವ ಥಾಪ ಅವರು ದಕ್ಷಿಣ ಕೊರಿಯಾದ ಕಿಮ್‌ ವೊನ್‌ಹೋ ಅವರನ್ನು 4–1ರಿಂದ ಸೋಲಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

ರೋಹಿತ್‌ ಟೋಕಸ್‌ ಅವರು 64 ಕೆ.ಜಿ ವಿಭಾಗದಲ್ಲಿ 5–0ರಿಂದ ಅಫ್ಘಾನಿಸ್ಥಾನದ ನೂರಿಸ್ತಾನಿ ಮೊಹಮ್ಮದ್‌ ಕಬೀರ್‌ ವಿರುದ್ಧ ಜಯ ಸಾಧಿಸಿದರು. ವೇಗ ಮತ್ತು ಆಕ್ರಮಣಕಾರಿ ಪಂಚ್‌ ಮೂಲಕ ಗಮನ ಸೆಳೆದರು.

ADVERTISEMENT

ಮ್ಯಾಕ್ರಾನ್‌ ಕಪ್‌ನ ಚಿನ್ನದ ಪದಕ ವಿಜೇತ ಬಾಕ್ಸರ್‌ ದೀಪಕ್‌ ತಮ್ಮ ಜಯದ ಅಭಿಯಾನವನ್ನು ಮುಂದುವರಿಸಿದ್ದು, ಶ್ರೀಲಂಕಾದ ಮುತುನಕ ಪಿಡಿ ಗೆದಾರ ವಿರುದ್ಧ 5–0ಯಿಂದ ಗೆದ್ದರು.75 ಕೆ.ಜಿ ವಿಭಾಗದಲ್ಲಿ ಆಶೀಶ್‌ ಕುಮಾರ್ ಚೀನಾದ ತಾಂಗ್ಲತಿಹಾನ್ ತಾವೋಹಿತರ್ಬಯ್ಕೆ ಅವರನ್ನು 3–2ರಿಂದ ಮಣಿಸಿದರು.

ಮಹಿಳೆಯರ ಬಾಕ್ಸಿಂಗ್‌ನ 54 ಕೆ.ಜಿ ವಿಭಾಗದಲ್ಲಿ ಮನೀಷಾ ಮೌನ್ ಅವರು ವಿಯಟ್ನಾಂನ ದೊ ನಾ ಉಯೇನ್ ಅವರನ್ನು 5–0ರಿಂದ ಸೋಲಿಸಿದರು. ಲವ್ಲಿನಾ ಬೊರ್ಗೋಹಿನ್‌ ಅವರು ವಿಯೆಟ್ನಾಂನ ತ್ರನ್‌ ಥಿ ಲಿನಾ ವಿರುದ್ಧ 5–0ರಿಂದ ಜಯ ಸಾಧಿಸಿದರು.

ನೀತೂಗೆ ನಿರಾಸೆ: ಮಹಿಳೆಯರ ಬಾಕ್ಸಿಂಗ್‌ನ 48 ಕೆ.ಜಿ ವಿಭಾಗದಲ್ಲಿ ನೀತೂ ಅವರಿಗೆ ನಿರಾಸೆಯಾಯಿತು. ತೈವಾನ್‌ ಪಿನ್‌ ಮೆಂಗ್‌–ಚೇ ವಿರುದ್ಧ 1–4 ಅಂತರದಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.