ನವದೆಹಲಿ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಗ್ನಾನಂದ ಮತ್ತು ಪಿ.ವಿ.ನಂದಿದಾ ಅವರು ಗುರುವಾರ ಕೊನೆಗೊಂಡ ಏಷ್ಯನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಓಪನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.
ಪ್ರಗ್ನಾನಂದ ಅವರು ಒಂಬತ್ತನೇ ಹಾಗೂ ಕೊನೆಯ ಸುತ್ತಿನಲ್ಲಿ ಭಾರತದವರೇ ಆದ ಬಿ.ಅಧಿಬನ್ ಅವರೊಂದಿಗೆ 63 ನಡೆಗಳಲ್ಲಿ ಡ್ರಾ ಮಾಡಿಕೊಂಡರು. ಈ ಮೂಲಕ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.
ಮಹಿಳೆಯರ ವಿಭಾಗದಲ್ಲಿ ನಂದಿದಾ ಅವರು ಒಂಬತ್ತನೇ ಸುತ್ತಿನಲ್ಲಿ ದಿವ್ಯಾ ದೇಶಮುಖ್ ಎದುರು ಡ್ರಾ ಮಾಡಿಕೊಂಡು ಒಟ್ಟು 7.5 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು.
ತಮಿಳುನಾಡಿನ 26 ವರ್ಷದ ನಂದಿದಾ, ಟೂರ್ನಿಯಲ್ಲಿ ಅಜೇಯರಾಗುಳಿದರು. ಅವರು ಒಟ್ಟು ಆರು ಸುತ್ತುಗಳಲ್ಲಿ ಗೆಲುವು ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.