ADVERTISEMENT

Asian Games | ಆರ್ಚರಿಯಲ್ಲಿ ಭಾರತಕ್ಕೆ ಚಿನ್ನ; ಪದಕಗಳ ಸಂಖ್ಯೆ 82ಕ್ಕೆ ಏರಿಕೆ

ಪಿಟಿಐ
Published 5 ಅಕ್ಟೋಬರ್ 2023, 5:24 IST
Last Updated 5 ಅಕ್ಟೋಬರ್ 2023, 5:24 IST
   

ಹಾಂಗ್‌ಜೌ (ಚೀನಾ): ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದ ಆರ್ಚರಿ ಕಾಂಪೌಂಡ್‌ ತಂಡ ವಿಭಾಗದ ಫೈನಲ್‌ನಲ್ಲಿ ಚೈನೀಸ್‌ ತೈಪೇಯಿ ತಂಡವನ್ನು ಮಣಿಸಿದ ಭಾರತ ಚಿನ್ನದ ಪದಕ ಗೆದ್ದಿದೆ.

ಭಾರತದ ಅಗ್ರಮಾನ್ಯ ಆರ್ಚರಿ ಸ್ಪರ್ಧಿಗಳಾದ ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಹಾಗೂ ಪರ್ನೀತ್‌ ಕೌರ್‌ 230–229 ಪಾಯಿಂಟ್‌ಗಳ ಅಂತರದಲ್ಲಿ ಚೈನೀಸ್‌ ತೈಪೇಯಿ ಜೋಡಿಯನ್ನು ಮಣಿಸಿತು.

ಈ ಪದಕದೊಂದಿಗೆ ಭಾರತಕ್ಕೆ ಆರ್ಚರಿ ಸ್ಪರ್ಧೆಗಳಲ್ಲಿ ಕನಿಷ್ಠ ಐದು ಪದಕಗಳನ್ನು ಖಾತ್ರಿಯಾಗಿದೆ. ಬುಧವಾರ ನಡೆದ ಕಾಂಪಾಂಡ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿಯೂ ಭಾರತಕ್ಕೆ ಚಿನ್ನದ ಪದಕ ದೊರೆತಿದೆ.

ADVERTISEMENT

2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾರ ತಲಾ ಒಂದೊಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿತ್ತು.

ಇದರೊಂದಿಗೆ ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.