
ಪಿಟಿಐ
ಏಷ್ಯನ್ ಗೇಮ್ಸ್ ಲೋಗೊ
ನವದೆಹಲಿ : ಭಾರತ ಒಲಿಂಪಿಕ್ ಸಂಸ್ಥೆಯ ಖಜಾಂಚಿ ಸಹದೇವ್ ಯಾದವ್ ಅವರು ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಚೆಫ್ ಡಿ ಮಿಷನ್ ಆಗಿ ಕಾರ್ಯನಿರ್ವಹಿಸುವರು.
ಭಾರತ ವೇಟ್‌ಲಿಫ್ಟಿಂಗ್ ಸಂಸ್ಥೆ ಮುಖ್ಯಸ್ಥರೂ ಆಗಿರುವ ಯಾದವ್ ಅವರೊಂದಿಗೆ ಟೇಬಲ್ ಟೆನಿಸ್ ದಂತಕತೆ ಅಚಂತಾ ಶರತ್ ಕಮಲ್ ಅವರು ಡೆಪ್ಯೂಟಿ ಚೆಫ್ ಡಿ ಮಿಷನ್ ಆಗಿರುವರು.
ಮುಂದಿನ ವರ್ಷದ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8ರವರೆಗೆ ಜಪಾನಿನ ಐಚಿ ನಗೊಯಾದಲ್ಲಿ ಕ್ರೀಡಾಕೂಟ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.