ADVERTISEMENT

ಬಾಕ್ಸಿಂಗ್ ಕೋಚ್‌ಗಳಿಗೆ ‘ಪಂಚ್‌’: ಕೊರಿಯಾದ ಇಬ್ಬರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 18:46 IST
Last Updated 1 ಸೆಪ್ಟೆಂಬರ್ 2018, 18:46 IST
ಬಾಕ್ಸರ್‌ ಪಂಗ್ ಚೊ ಮಿ (ಬಲ) ಮತ್ತು ಕೋಚ್‌ ಪಕ್‌ ಚೊಲ್ ಜುನ್ ಅವರು ರೆಫರಿ ಜೊತೆ ವಾಗ್ವಾದ ನಡೆಸಿದರು ಎಎಫ್‌ಪಿ ಚಿತ್ರ
ಬಾಕ್ಸರ್‌ ಪಂಗ್ ಚೊ ಮಿ (ಬಲ) ಮತ್ತು ಕೋಚ್‌ ಪಕ್‌ ಚೊಲ್ ಜುನ್ ಅವರು ರೆಫರಿ ಜೊತೆ ವಾಗ್ವಾದ ನಡೆಸಿದರು ಎಎಫ್‌ಪಿ ಚಿತ್ರ   

ಜಕಾರ್ತ: ಬಾಕ್ಸಿಂಗ್‌ ರಿಂಗ್‌ನಲ್ಲೇ ಪ್ರತಿಭಟನೆ ನಡೆಸಿದ ಉತ್ತರ ಕೊರಿಯಾದ ಇಬ್ಬರು ಕೋಚ್‌ಗಳನ್ನು ಏಷ್ಯನ್‌ ಕ್ರೀಡಾಕೂಟದಿಂದ ಹೊರದಬ್ಬಲಾಗಿದೆ. ಮಹಿಳೆಯರ ಫ್ಲೈವೇಟ್ ವಿಭಾಗದ ಸ್ಪರ್ಧೆಗಳಲ್ಲಿ ದೇಶದ ಕೋಚ್‌ಗಳು ಸೋತ ನಂತರ ಕೋಚ್‌ಗಳು ಪ್ರತಿಭಟನೆ ನಡೆಸಿದ್ದರು.

ಚೀನಾದ ಚಾಂಗ್ ಯಾನ್ ಎದುರಿನ ಫೈನಲ್‌ ಪಂದ್ಯದಲ್ಲಿ ಉತ್ತರ ಕೊರಿಯಾದ ಪಂಗ್ ಚೋಲ್‌ ಮಿ 2–3ರಿಂದ ಸೋತಿದ್ದರು. ಸ್ಪರ್ಧೆ ಮುಗಿದ ನಂತರ ಪಂಗ್ ಚೋಲ್‌ ಮಿ ಅವರ ಕೋಚ್‌ ಪಕ್ ಚೊಲ್ ಜುನ್ ರಿಂಗ್ ಬಿಟ್ಟು ತೆರಳಲು ನಿರಾಕರಿಸಿದ್ದರು. ಪಂಗ್ ಚೋಲ್‌ ಮಿ ಅವರಿಗೂ ಅಲ್ಲೇ ಉಳಿಯುವಂತೆ ಸೂಚಿಸಿದ್ದರು.

ನಂತರ ಇಬ್ಬರನ್ನೂ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹೊರಗೆ ಕರೆದುಕೊಂಡು ಹೋಗಿದ್ದರು. ಮತ್ತೊಬ್ಬ ಕೋಚ್‌ ಪಕ್ ಇಲ್‌ ನಾಮ್‌ ರೆಫರಿಗಳ ಎದುರು ಕೋಪದಿಂದ ಮಾತನಾಡಿದ್ದರು. ಇವರಿಬ್ಬರ ಮೇಲೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಫೆಡರೇಷನ್‌ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.