ADVERTISEMENT

Asian Games 2023 | ಬಾಕ್ಸಿಂಗ್‌ನಲ್ಲಿ ಭಾರತದ ನಿಖತ್‌ಗೆ ಕಂಚಿನ ಪದಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2023, 12:42 IST
Last Updated 1 ಅಕ್ಟೋಬರ್ 2023, 12:42 IST
<div class="paragraphs"><p>&nbsp;ನಿಖತ್ ಝರೀನ್‌</p></div>

 ನಿಖತ್ ಝರೀನ್‌

   

ಚಿತ್ರ:ಪಿಟಿಐ

ಹಾಂಗ್‌ಝೌ: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ.

ADVERTISEMENT

ಇಂದು ನಡೆದ ಮಹಿಳೆಯರ 50 ಕೆ.ಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ನಿಖತ್‌ ಝರೀನ್‌ ಕಂಚಿನ ಪದಕ ಪದಕ ಗೆದ್ದಿದ್ದಾರೆ.

ನಿಖತ್‌ ಝರೀನ್‌ ವಿರುದ್ಧ ಗೆದ್ದ ಥಾಯ್ಲೆಂಡ್‌ನ ಚುಥಾಮತ್ ರಕ್ಸತ್ ಫೈನಲ್‌ ಪ್ರವೇಶಿಸಿದರು.

ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಜೋರ್ಡಾನ್‌ನ ನಾಸರ್‌ ಹನ್ನನ್ ಅವರನ್ನು ಸೋಲಿಸುವ ಮೂಲಕ ನಿಖತ್‌, ಸೆಮಿಫೈನಲ್‌ ತಲುಪಿದ್ದರು. ಆ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು.

ಎರಡು ಬಾರಿಯ ವಿಶ್ವ ಚಾಂಪಿಯನ್, ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್ ಆಗಿರುವ ನಿಖತ್‌, ಏಷ್ಯನ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಆಗುವ ಕನಸು ಭಗ್ನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.