ADVERTISEMENT

Asian Games | ಸ್ಕ್ವಾಷ್‌ನಲ್ಲಿ ಭಾರತಕ್ಕೆ ಕಂಚಿನ ಪದಕ; ಮತ್ತೊಂದು ತಂಡ ಫೈನಲ್‌ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2023, 6:33 IST
Last Updated 4 ಅಕ್ಟೋಬರ್ 2023, 6:33 IST
<div class="paragraphs"><p>ಅನಾಹತ್‌ ಸಿಂಗ್‌ ಹಾಗೂ ಅಭಯ್‌ ಸಿಂಗ್‌</p></div>

ಅನಾಹತ್‌ ಸಿಂಗ್‌ ಹಾಗೂ ಅಭಯ್‌ ಸಿಂಗ್‌

   

ಚಿತ್ರಕೃಪೆ: Twitter / @Media_SAI

ಹಾಂಗ್‌ಝೌ: ಭಾರತದ ಅನಾಹತ್‌ ಸಿಂಗ್‌ ಹಾಗೂ ಅಭಯ್‌ ಸಿಂಗ್‌ ಜೋಡಿ ಏಷ್ಯನ್‌ ಕ್ರೀಡಾಕೂಟದ ಸ್ಕ್ವಾಷ್‌ ಸ್ಪರ್ಧೆಯ ಮಿಕ್ಸೆಡ್‌ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿತು. ಆದಾಗ್ಯೂ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.

ADVERTISEMENT

ಮಲೇಷ್ಯಾದ ಐಫಾ ಬಿಂಟಿ ಅಜಂ ಮತ್ತು ಮೊಹಮ್ಮದ್‌ ಸೈಫಿಕ್‌ ಕಮಾಲ್‌ ಅವರಿಂದ ಕಠಿಣ ಪೈಪೋಟಿ ಎದುರಿಸಿದ ಭಾರತದ ಜೋಡಿ  39 ನಿಮಿಷ ನಡೆದ ಹಣಾಹಣಿಯಲ್ಲಿ 11-8, 2-11, 9-11 ಅಂತರದಿಂದ ಸೋಲೊಪ್ಪಿಕೊಂಡಿತು.

ಇದೇ ದಿನ ನಡೆದ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಭಾರತದವರೇ ಆದ ದೀಪಿಕಾ ಪಲ್ಲಿಕಲ್‌ ಮತ್ತು ಹರಿಂದರ್‌ ಪಾಲ್‌ ಸಿಂಗ್‌ ಜೋಡಿ ಹಾಂಗ್‌ ಕಾಂಗ್‌ ಆಟಗಾರರ ಎದುರು ಜಯ ಸಾಧಿಸಿದೆ. ಫೈನಲ್‌ಗೆ ಲಗ್ಗೆ ಇಟ್ಟಿರುವ ಈ ತಂಡ ಮತ್ತೊಂದು ಪದಕವನ್ನು ಖಾತ್ರಿಪಡಿಸಿದೆ.

ಅನಾಹತ್‌ ಹಾಗೂ ಅಭಯ್‌ ಗಳಿಸಿದ ಪದಕವು, ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ 70ನೇ ಪದಕ. 2018ರಲ್ಲಿ ಇಂಡೊನೇಷ್ಯಾದಲ್ಲಿ ನಡೆದಿದ್ದ ಕೂಟದಲ್ಲಿ 70 ಪದಕ ಗಳಿಸಿದ್ದು ಭಾರತದ ಶ್ರೇಷ್ಠ ಸಾಧನೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.