ಶಿಮ್ಕೆಟ್ (ಕಜಾಕಸ್ತಾನ): ಭಾರತದ ಮಾನಸಿ ರಘುವಂಶಿ ಮತ್ತು ಯಶಸ್ವಿ ರಾಥೋಡ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಮಹಿಳಾ ಜೂನಿಯರ್ ಸ್ಕೀಟ್ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡು ಗಮನ ಸೆಳೆದರು.
ಮಾನಸಿ ಫೈನಲ್‌ನಲ್ಲಿ 53 ಸ್ಕೋರ್ ಗಳಿಸಿದರೆ, ಯಶಸ್ವಿ ಅವರು ಗುರಿಯಲ್ಲಿ 52ರ ಸ್ಕೋರ್ ಮಾಡಿದರು. ಕಜಾಕಸ್ತಾನದ ಲಿಡಿಯಾ ಬಶರೋವಾ (40) ಕಂಚಿನ ಪದಕ ಪಗಳಿಸಿದರು. ಕಣದಲ್ಲಿದ್ದ ಭಾರತದ ಮತ್ತೊಬ್ಬರಾದ ಅಗ್ರಮಾ ಕನ್ವರ್ ಫೈನಲ್‌ನಲ್ಲಿ ಆರನೇ ಹಾಗೂ ಅಂತಿಮ ಸ್ಥಾನ ಗಳಿಸಿದರು.
ಮಾನಸಿ ಐದು ಸುತ್ತುಗಳಲ್ಲಿ 106 ಸ್ಕೋರ್ ಕಲೆಹಾಕಿ ಅರ್ಹತಾ ಸುತ್ತಿನ ಎರಡನೇ ಸ್ಥಾನ ಗಳಿಸಿದ್ದರು. ಬಶರೋವಾ (112) ಮೊದಲ ಸ್ಥಾನದಲ್ಲಿದ್ದರು. ಯಶಸ್ವಿ (102) ಐದನೇ ಸ್ಥಾನದಲ್ಲಿದ್ದರು. ಅಗ್ರಿಮಾ (101) ಸಹ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದರು.
ಇದೇ ವೇಳೆ, ಇಶಾಣ್ ಸಿಂಗ್ ಲಿಬ್ರಾ (116), ಹರ್‌ಮೆಹರ್ ಸಿಂಗ್ ಲಲ್ಲಿ (115) ಮತ್ತು ಜ್ಯೋತಿರಾಧಿತ್ಯ ಸಿಂಗ್ ಸಿಸೋಡಿಯಾ (110) ಅವರು ಜೂನಿಯರ್ ಪುರುಷರ ಸ್ಕೀಟ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಕ್ರಮವಾಗಿ ಈ ಸುತ್ತನ್ನು ಮೊದಲ, ಮೂರನೇ ಮತ್ತು ಐದನೇ ಸ್ಥಾನದಲ್ಲಿ ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.