ನವದೆಹಲಿ: ಭಾರತದ ನಿತಿನ್ ಗುಪ್ತಾ ಅವರು ಆರನೇ ಏಷ್ಯನ್ 18 ವರ್ಷದೊಳಗಿನವರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 5000 ಮೀ. ರೇಸ್ ವಾಕ್‌ನಲ್ಲಿ ಬುಧವಾರ ಬೆಳ್ಳಿ ಪದಕ ಗೆದ್ದರು.
17 ವರ್ಷ ವಯಸ್ಸಿನ ಗುಪ್ತಾ 20ನಿ.21.51 ಸೆಕೆಂಡಗುಳಲ್ಲಿ ನಿಗದಿತ ದೂರವನ್ನು ಕ್ರಮಿಸಿ ಎರಡನೇ ಸ್ಥಾನ ಪಡೆದರು. ಚೀನಾದ ಝು ನಿಂಗ್‌ಹಾವೊ ಈ ದೂರವನ್ನು 20 ನಿ.21.50 ಸೆ.ಗಳಲ್ಲಿ ಪೂರೈಸಿ ಚಿನ್ನ ಗೆದ್ದರು. ಚೀನಾ ತೈಪಿಯ ಶೆಂಗ್ ಕ್ವಿನ್ ಲೊ (21ನಿ.37.88 ಸೆ.) ಕಂಚಿನ ಪದಕ ಪಡೆದರು.
ಪಟ್ನಾದಲ್ಲಿ ಕಳೆದ ತಿಂಗಳು ನಡೆದ ರಾಷ್ಟ್ರೀಯ ಯುವ ಅಥ್ಲೆಟಿಕ್ ಕೂಟದಲ್ಲಿ ಗುಪ್ತಾ ಅವರು ಈ ಸ್ಪರ್ಧೆಯನ್ನು 19ನಿ.24.48 ಸೆ.ಗಳಲ್ಲಿ ಕ್ರಮಿಸಿ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಸುಧಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.