ADVERTISEMENT

ಏಷ್ಯನ್‌ ಕುಸ್ತಿ: ವಿಶ್ವಜೀತ್‌, ಧನ್‌ರಾಜ್‌ಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:52 IST
Last Updated 18 ಜುಲೈ 2024, 15:52 IST
   

ಬೆಂಗಳೂರು: ಮರಾಠ ಎಲ್‌ಐಆರ್‌ಸಿ ಬಾಯ್ಸ್‌ ಸ್ಪೋರ್ಟ್‌ನ ಕೆಡೆಟ್‌ ವಿಶ್ವಜೀತ್‌ ಮೋರೆ ಅವರು ಜೋರ್ಡಾನ್‌ನ ಆಮ್ಮನ್‌ನಲ್ಲಿ ನಡೆದ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನ 23 ವರ್ಷದೊಳಗಿನವರ ಗ್ರೀಕೊ–ರೋಮನ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಮೈಲಿಗಲ್ಲು ಸಾಧಿಸಿದ್ದಾರೆ. 

ಮತ್ತೊಬ್ಬ ಕೆಡೆಟ್‌ ಧನರಾಜ್‌ ಜಾಮ್ನಿಕ್‌ ಅವರು ಕೂಡಾ ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನ 15 ವರ್ಷದೊಳಗಿನ ಗ್ರೀಕೊ–ರೋಮನ್‌ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಅಭಿಜೀತ್‌ ಮತ್ತು ಧನರಾಜ್‌ ಸಾಧನೆಗೆ ಬ್ರಿಗೇಡಿಯರ್‌ ಜೊಯ್‌ದೀಪ್‌ ಮುಖರ್ಜಿ ರ್ಸಾನೆ ವ್ಯಕ್ತಪಡಿಸಿದ್ದಾರೆ. ‘ಕೆಡೆಟ್‌ಗಳ ಸಾಧನೆಗಳು ಮರಾಠ ಎಲ್‌ಐಆರ್‌ಸಿ ಬಾಯ್ಸ್‌ ಸ್ಪೋರ್ಟ್‌ ಕಂಪನಿಯಲ್ಲಿ ಒದಗಿಸಲಾದ ಉತ್ತಮ ಮಾರ್ಗದರ್ಶನ ಮತ್ತು ತರಬೇತಿಯನ್ನು ಎತ್ತಿತೋರಿಸುತ್ತವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.