ADVERTISEMENT

ಉದ್ದೀಪನ ಮದ್ದುಸೇವನೆ ಪರೀಕ್ಷೆ ತಪ್ಪಿಸಿಕೊಂಡ ದೂರ ಅಂತರದ ಓಟಗಾರ್ತಿ ಪೂಜಾ ಅಮಾನತು

ಪಿಟಿಐ
Published 5 ಫೆಬ್ರುವರಿ 2026, 14:34 IST
Last Updated 5 ಫೆಬ್ರುವರಿ 2026, 14:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಉದ್ದೀಪನ ಮದ್ದುಸೇವನೆ ಪರೀಕ್ಷೆ ತಪ್ಪಿಸಿಕೊಂಡಿದ್ದಕ್ಕೆ ದೂರ ಅಂತರದ ಓಟಗಾರ್ತಿ ಪೂಜಾ ಆತ್ಮರಾಮ್ ಅವರನ್ನು ವಿಶ್ವ ಅಥ್ಲೆಟಿಕ್ಸ್‌ನ ಅಥ್ಲೆಟಿಕ್ಸ್‌ ಇಂಟೆಗ್ರಿಟಿ ಯೂನಿಟ್‌ (ಎಐಯು) ಅಮಾನತು ಮಾಡಿದೆ.

2024ರ ಇಂಡಿಯನ್ ಗ್ರ್ಯಾನ್‌ಪ್ರೀ2 ಕೂಟದಲ್ಲಿ ಭಾಗವಹಿಸಿದ್ದ, 30 ವರ್ಷ ವಯಸ್ಸಿನ ಪೂಜಾ 5000 ಮೀ. ಮತ್ತು 10,000 ಮೀ. ಓಟದಲ್ಲಿ ಮೂರನೇ ಸ್ಥಾನ ಗಳಿಸಿದ್ದರು.

ADVERTISEMENT

ಡೋಪಿಂಗ್ ಪರೀಕ್ಷೆ ತಪ್ಪಿಸಿಕೊಂಡಿದ್ದಕ್ಕೆ ಅಥವಾ ಮಾದರಿ ನೀಡಲು ವಿಫಲವಾಗಿದ್ದಕ್ಕೆ ಅಥವಾ ನಿರಾಕರಿಸಿದ್ದಕ್ಕೆ  ಪೂಜಾ ಆತ್ಮಾರಾಮ್ (ಭಾರತ) ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಎಐಯು ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.