ADVERTISEMENT

100 ಮೀ. ಓಟ: ಎಲೈನ್‌ ಥಾಮ್ಸನ್ ಹೆರಾ ದಾಖಲೆ

ರಾಯಿಟರ್ಸ್
Published 17 ಏಪ್ರಿಲ್ 2022, 13:43 IST
Last Updated 17 ಏಪ್ರಿಲ್ 2022, 13:43 IST
ಎಲೈನ್ ಥಾಮ್ಸನ್ ಹೆರಾ– ಎಎಫ್‌ಪಿ ಚಿತ್ರ
ಎಲೈನ್ ಥಾಮ್ಸನ್ ಹೆರಾ– ಎಎಫ್‌ಪಿ ಚಿತ್ರ   

ಬೆಂಗಳೂರು: ಐದು ಬಾರಿಯ ಒಲಿಂಪಿಕ್ಸ್ ಚಾಂಪಿಯನ್‌, ಜಮೈಕಾದ ಎಲೈನ್ ಥಾಮ್ಸನ್ ಹೆರಾ ಮಹಿಳೆಯರ 100 ಮೀಟರ್ಸ್ ಓಟದಲ್ಲಿ ಈ ವರ್ಷದ ದಾಖಲೆ ಬರೆದರು.

ಕ್ಯಾಲಿಫೋರ್ನಿಯಾದ ವಾಲ್‌ನಟ್‌ನಲ್ಲಿ ನಡೆದ ಗೋಲ್ಡನ್‌ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ಅವರು 10.89 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆ ಮಾಡಿದರು. ಆದರೆ ಫೈನಲ್‌ನಲ್ಲಿ ಓಡಲು ಅವರು ನಿರಾಕರಿಸಿದರು. ಅದಕ್ಕೆ ಯಾವುದೇ ಕಾರಣವನ್ನೂ ನೀಡಲಿಲ್ಲ.

‘ಅಂಗಣಕ್ಕೆ ಮರಳಿದ ಮೊದಲ ಕೂಟದಲ್ಲೇ 10.89 ಸೆಕೆಂಡುಗಳ ಸಾಧನೆ ಮಾಡಿದ್ದು ಸಂತಸ ತಂದಿದೆ‘ ಎಂದು ಎಲೈನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ 100 ಮತ್ತು 200 ಮೀಟರ್ಸ್ ಓಟಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಅವರು 4X100 ಮೀಟರ್ಸ್‌ ರಿಲೇ ವಿಭಾಗದಲ್ಲೂ ಜಮೈಕಾ ತಂಡಕ್ಕೆ ಅಗ್ರಸ್ಥಾನ ಗಳಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.