ADVERTISEMENT

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಾತ್ವಿಕ್‌– ಚಿರಾಗ್ ಜಯದ ಆರಂಭ

ಇಶಾನ್‌– ತನಿಶಾಗೂ ಮುನ್ನಡೆ

ಪಿಟಿಐ
Published 26 ಏಪ್ರಿಲ್ 2022, 12:51 IST
Last Updated 26 ಏಪ್ರಿಲ್ 2022, 12:51 IST
ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ– ಪಿಟಿಐ ಚಿತ್ರ
ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ– ಪಿಟಿಐ ಚಿತ್ರ   

ಮನಿಲಾ: ಎದುರಾಳಿಗಳನ್ನು ಸುಲಭವಾಗಿ ಮಣಿಸಿದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸುತ್ತು ತಲುಪಿದ್ದಾರೆ.

ಮಂಗಳವಾರ ಇಲ್ಲಿ ಆರಂಭವಾದ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಆಟಗಾರರು 21–13, 21–9ರಿಂದ ಥಾಯ್ಲೆಂಡ್‌ನ ಎಪಿಲುಕ್‌ ಗೇಟರ್‌ಹಾಂಗ್‌ ಮತ್ತು ನಾಚನನ್‌ ತುಲಮೊಕ್ ಅವರನ್ನು ಪರಾಭವಗೊಳಿಸಿದರು. ಕೇವಲ 27 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಸಾತ್ವಿಕ್– ಚಿರಾಗ್, ಮುಂದಿನ ಸುತ್ತಿನಲ್ಲಿ ಜಪಾನ್‌ನ ಅಕಿರೊ ಕೊಗಾ ಮತ್ತು ತೈಚಿ ಸೈಟೊ ಅವರನ್ನು ಎದುರಿಸುವರು.

ADVERTISEMENT

ಮಿಶ್ರ ಡಬಲ್ಸ್ ವಿಭಾಗದಲ್ಲಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಜೋಡಿಯು ಶುಭಾರಂಭ ಮಾಡಿತು. ಮೊದಲ ಸುತ್ತಿನಲ್ಲಿ ಈ ಜೋಡಿಯು21-15, 21-17ರಿಂದ ಹಾಂಗ್‌ಕಾಂಗ್‌ನ ಲಾ ಚೆಕ್‌ ಹಿಮ್‌ ಮತ್ತು ಯೆಂಗ್‌ ಗಾ ಟಿಂಗ್ ಸವಾಲು ಮೀರಿದರು.

ಪುರುಷರ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಅವರ ಅಭಿಯಾನ ಮೊದಲ ಸುತ್ತಿನಲ್ಲೇ ಅಂತ್ಯವಾಯಿತು. ಜಿದ್ದಾಜಿದ್ದಿನ ಹೋರಾಟದಲ್ಲಿ ಭಾರತದ ಆಟಗಾರರು10-21, 21-19, 16-21ರಿಂದ ದಕ್ಷಿಣ ಕೊರಿಯಾದ ಕಾಂಗ್‌ ಮಿನ್‌ಹ್ಯುಕ್‌ ಮತ್ತು ಕಿಮ್‌ ವೊನ್ಹೊ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.