ಸೋಲೊ (ಇಂಡೊನೇಷ್ಯಾ): ಭಾರತ ತಂಡ, ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಮಿಶ್ರ ತಂಡ ಚಾಂಪಿಯನ್‌ಷಿಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಶ್ರೀಲಂಕಾ ತಂಡವನ್ನು 110–69 ರಿಂದ ಸೋಲಿಸಿತು.
ಇಲ್ಲಿ ಟೂರ್ನಿಯಲ್ಲಿ ರಿಲೇ ಪಾಯಿಂಟ್ ಮಾದರಿಯ ವ್ಯವಸ್ಥೆ ಅಳವಡಿಸಲಾಗಿದೆ. ತಂಡವೊಂದು ಪಂದ್ಯ ಗೆಲ್ಲಬೇಕಾದರೆ 110 ಪಾಯಿಂಟ್ ಗಳಿಸಬೇಕಾಗುತ್ತದೆ.
ವಿಷ್ಣು ಕೋಡೆ ಮತ್ತು ರೆಷಿಕಾ ಯು ಅವರನು 11–5 ರಿಂದ ಕೆನೆತ್ ಅರುಗ್ಗೊಡ– ಇಸುರಿ ಅತ್ತನಾಯಕೆ ಜೋಡಿಯನ್ನು ಸೋಲಿಸಿತು.
ಗಾಯತ್ರಿ– ಮಾನಸಾ ರಾವತ್ ಸೋದರಿಯರ ಜೋಡಿ ಇನ್ನೊಂದು ಪಂದ್ಯದಲ್ಲಿ 22–14 ರಿಂದ ಅತ್ತನಾಯಕೆ– ಸಿತುಮಿ ಡಿ ಸಿಲ್ವ ಜೋಡಿಯನ್ನು ಮಣಿಸಿತು. ವಿಶ್ವದ ಅಗ್ರಕ್ರಮಾಂಕದ ಜೂನಿಯರ್ ಆಟಗಾರ್ತಿ ತನ್ವಿ ಶರ್ಮಾ 33–21 ರಿಂದ ಸಿತುಲಿ ರಣಸಿಂಘೆ ಅವರನ್ನು ಹಿಮ್ಮೆಟ್ಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.