ADVERTISEMENT

ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌ ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 18:42 IST
Last Updated 18 ಅಕ್ಟೋಬರ್ 2021, 18:42 IST
ಲಕ್ಷ್ಯ ಸೇನ್ – ಟ್ವಿಟರ್ ಸಂಗ್ರಹ ಚಿತ್ರ
ಲಕ್ಷ್ಯ ಸೇನ್ – ಟ್ವಿಟರ್ ಸಂಗ್ರಹ ಚಿತ್ರ   

ಅಲ್ಮೆರ್, ನೆದರ್ಲೆಂಡ್ಸ್ (ಪಿಟಿಐ): ಹಾಲಿ ಚಾಂಪಿಯನ್‌, ಭಾರತದ ಲಕ್ಷ್ಯ ಸೇನ್ ಅವರು ಡಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅವರು12-21, 16-21ರಿಂದ ಸಿಂಗಪುರದ ಲೋಹ್ ಕೀನ್ ಯೆವ್‌ ಎದುರು ಮಣಿದರು. ಕೇವಲ 36 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

20 ವರ್ಷದ ಲಕ್ಷ್ಯ, 2019ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದರು. 2020ರ ಟೂರ್ನಿಯನ್ನು ಕೋವಿಡ್ ಕಾರಣ ರದ್ದು ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.