ADVERTISEMENT

ಬ್ಯಾಡ್ಮಿಂಟನ್‌ | ಸ್ವಿಸ್‌ ಓಪನ್‌, ಯುರೋಪಿಯನ್‌ ಕೂಟ ರದ್ದು

ಕೊರೊನಾ ಸೋಂಕು ಹಾವಳಿ

ಏಜೆನ್ಸೀಸ್
Published 10 ಜೂನ್ 2020, 16:37 IST
Last Updated 10 ಜೂನ್ 2020, 16:37 IST

ಪ್ಯಾರಿಸ್‌: ಕೊರೊನಾ ವೈರಸ್‌ ಸೋಂಕು ಹಾವಳಿ ಮುಂದುವರಿದಿರುವ ಕಾರಣ ಈ ವರ್ಷದ ಸ್ವಿಸ್‌ ಓಪನ್‌ ಮತ್ತು ಯುರೋಪಿಯನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗಳನ್ನು ರದ್ದುಮಾಡಲಾಗಿದೆ.

ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಬುಧವಾರ ಈ ವಿಷಯ ಪ್ರಕಟಿಸಿದೆ. ಈ ಎರಡೂ ಟೂರ್ನಿಗಳನ್ನು ಅಮಾನತಿನಲ್ಲಿಡಲಾಗಿತ್ತು. ಯುರೋಪಿಯನ್‌ ಚಾಂಪಿಯನ್‌ಷಿಪ್‌ ಮೂರು ತಿಂಗಳ ಹಿಂದೆ ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ನಡೆಯಬೇಕಾಗಿತ್ತು. 2021ರ ಚಾಂಪಿಯನ್‌ಷಿಪ್‌ ನಡೆಸಲು ಉಕ್ರೇನ್‌ ಒಪ್ಪಿಕೊಂಡಿದೆ ಎಂದು ಫೆಡರೇಷನ್‌ ತಿಳಿಸಿದೆ.

ಸ್ಪೇನ್‌ನ ತಾರೆ ಕರೋಲಿನಾ ಮರಿನ್‌ 2018ರಲ್ಲಿ ಹುಲ್ವಾದಲ್ಲಿ ನಡೆದಿದ್ದ ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಬಾರಿ ದಾಖಲೆ ಐದನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದರು.

ADVERTISEMENT

ಸ್ವಿಸ್‌ ಓಪನ್‌ ಕೂಡ ಕಳೆದ ಮಾರ್ಚ್‌ನಲ್ಲಿ ನಡೆಯಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.