
ಪುಣೆ: ಭಾರತದ ಮೊದಲ ಯುಸಿಐ 2.2 ಬಜಾಜ್ ಪುಣೆ ಗ್ರ್ಯಾಂಡ್ ಟೂರ್ – 2026 ಪುರುಷರ ಎಲೈಟ್ ರೋಡ್ ಸೈಕ್ಲಿಂಗ್ ರೇಸ್ 2026ರ ಜನವರಿ 19 ರಿಂದ 23ರವರೆಗೆ ಪುಣೆಯಲ್ಲಿ ಜರುಗಲಿದೆ.
ಈ ಸ್ಪರ್ಧೆಯು ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಬಜಾಜ್ ಪುಣೆ ಗ್ರ್ಯಾಂಡ್ ಟೂರ್‌ನಲ್ಲಿ ವಿಶ್ವದ ನಾನಾ ಭಾಗಗಳಿಂದ ಬಂದಿರುವ 28 ತಂಡಗಳು ಪಾಲ್ಗೊಳ್ಳಲಿವೆ.
ಇದರಲ್ಲಿ ವಿಶ್ವದ ಪ್ರಮುಖ ಸೈಕ್ಲಿಂಗ್ ರಾಷ್ಟ್ರಗಳನ್ನು ಪ್ರತಿನಿಧಿಸುವ ನಾಲ್ಕು ರಾಷ್ಟ್ರೀಯ ತಂಡಗಳೂ ಸೇರಿವೆ.
ಭಾರತೀಯ ತಂಡವಾಗಿ ‘ಇಂಡಿಯಾ ಎ’ ಹಾಗೂ ‘ಇಂಡಿಯಾ ಬಿ’ ಎಂಬ ಎರಡು ತಂಡಗಳು ಸ್ಪರ್ಧಿಸಲಿವೆ.
437 ಕಿಮೀ ದೂರವನ್ನು ಒಳಗೊಂಡಿರುವ ಈ ನಾಲ್ಕು ಹಂತಗಳ ರೋಡ್ ರೇಸ್‌ಗೆ ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡಿದೆ.
ಈ ಕುರಿತು ಮಾತನಾಡಿದ ಪುಣೆ ಗ್ರ್ಯಾಂಡ್ ಟೂರ್ ಇನ್-ಚಾರ್ಜ್ ಜಿತೇಂದ್ರ ದುಡಿ, ‘ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ನೆದರ್‌ಲ್ಯಾಂಡ್, ಆಸ್ಟ್ರೇಲಿಯಾ, ಚೀನಾ, ಮಲೇಶಿಯಾ, ಇಂಡೋನೇಷಿಯಾ, ಥೈಲ್ಯಾಂಡ್ ಮುಂತಾದ ಪ್ರಮುಖ ಸೈಕ್ಲಿಂಗ್ ರಾಷ್ಟ್ರಗಳ ತಂಡಗಳು ಈ ರೇಸ್‌ನಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿವೆ. ಭಾರತದಲ್ಲಿ ಸೈಕ್ಲಿಂಗ್ ಕ್ರೀಡೆಯ ಬೆಳವಣಿಗೆಗೆ ಯೂನಿಯನ್ ಸೈಕ್ಲಿಸ್ಟ್ ಇಂಟರ್‌ನ್ಯಾಷನಲ್ (ಯುಸಿಐ) ವಿಶೇಷವಾಗಿ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಹಂತ 1: ಮುಲ್ಶಿ–ಮವಾಲ್ ಮೈಲ್ಸ್ — 91.8 ಕಿ.ಮೀ
ಹಂತ 2: ಮರಾಠಾ ಹೆರಿಟೇಜ್ ಸರ್ಕ್ಯೂಟ್ — 109.15 ಕಿ.ಮೀ
ಹಂತ 3: ವೆಸ್ಟರ್ನ್ ಘಾಟ್ಸ್ ಗೇಟ್‌ವೇ — 137.07 ಕಿ.ಮೀ
ಹಂತ 4: ಪುಣೆ ಪ್ರೈಡ್ ಲೂಪ್ — 99.15 ಕಿ.ಮೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.