ADVERTISEMENT

ಬೆಂಗಳೂರು ಗಾಲ್ಫ್‌: ಪ್ರಣವಿಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:32 IST
Last Updated 9 ಜೂನ್ 2022, 19:32 IST
ಪ್ರಣವಿ ಅರಸ್‌
ಪ್ರಣವಿ ಅರಸ್‌   

ಬೆಂಗಳೂರು: ಮೈಸೂರಿನ ಪ್ರಣವಿ ಅರಸ್ ಅವರು ಇಲ್ಲಿ ನಡೆಯುತ್ತಿರುವ ಹೀರೊ ಮಹಿಳಾ ಗಾಲ್ಫ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಈ ಋತುವಿನಲ್ಲಿ ಎರಡು ಟೂರ್ನಿಗಳಲ್ಲಿ ಜಯ ಸಾಧಿಸಿರುವ ಪ್ರಣವಿ, ಪ್ರೆಸ್ಟೀಜ್‌ ಗಾಲ್ಫ್‌ಶೈರ್ ಅಂಗಣದಲ್ಲಿ ಮಿಂಚಿದರು.

ಎರಡನೇ ಸುತ್ತಿನ ಜಾಹ್ನವಿ ಬಕ್ಷಿ ಎರಡನೇ ಸ್ಥಾನದಲ್ಲಿದ್ದರು. ಅಸ್ಮಿತಾ ಮೂರನೇ ಸ್ಥಾನದಲ್ಲಿದ್ದರು. ವಿಧಾತ್ರಿ ಅರಸ್‌ ನಾಲ್ಕು ಮತ್ತು ಸಿದ್ಧಿ ಕಪೂರ್ ಐದನೇ ಸ್ಥಾನದಲ್ಲಿದ್ದರು. ಹೀನಾ ಕಾಂಗ್‌, ಜ್ಯೋತ್ಸ್ನಾ ಸಿಂಗ್‌, ರಿಧಿಮಾ ದಿಲಾವರಿ ಮತ್ತು ನೇಹಾ ತ್ರಿಪಾಠಿ ಜಂಟಿ ಆರನೇ ಸ್ಥಾನದಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.