ADVERTISEMENT

ಪ್ರೈಮ್‌ ವಾಲಿಬಾಲ್‌ ಲೀಗ್‌: ಟಾರ್ಪಿಡೋಸ್‌ಗೆ ಐದನೇ ಜಯ

ಪಿಟಿಐ
Published 17 ಅಕ್ಟೋಬರ್ 2025, 0:25 IST
Last Updated 17 ಅಕ್ಟೋಬರ್ 2025, 0:25 IST
   

ಹೈದರಾಬಾದ್: ತೀವ್ರ ಸವಾಲು ಎದುರಿಸಿದ ಬೆಂಗಳೂರು ಟಾರ್ಪಿಡೋಸ್ ತಂಡ, ಬುಧವಾರ ರಾತ್ರಿ ನಡೆದ ಪ್ರೈಮ್‌ ವಾಲಿಬಾಲ್‌ ಲೀಗ್‌ ಪಂದ್ಯದಲ್ಲಿ ಕ್ಯಾಲಿಕಟ್‌ ಹೀರೋಸ್ ತಂಡವನ್ನು 20–18, 20–18, 7–15, 11–15, 15–12 ರಿಂದ ಸೋಲಿಸುವಲ್ಲಿ ಯಶಸ್ವಿ ಆಯಿತು.

ಇದು ಬೆಂಗಳೂರಿನ ತಂಡಕ್ಕೆ ಐದನೇ ಜಯ.

ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ರಕ್ಷಣೆಯ ಆಟದಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಕ್ಯಾಲಿಕಟ್ ತಂಡದ ಶಮೀಮುದ್ದೀನ್‌ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದರು. ಬ್ಯಾಡ್ಮಿಂಟನ್ ತಾರೆ ಎಚ್.ಎಸ್‌.ಪ್ರಣಯ್ ಅವರು ಪ್ರೇಕ್ಷಕರ ಸಾಲಿನಲ್ಲಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.