ADVERTISEMENT

ಬೆಂಗಳೂರು ಚಳಿಗಾಲದ ಡರ್ಬಿ: ಜಮಾರಿ–ತೆಹಾನಿ ನಡುವೆ ನೇರ ಸ್ಪರ್ಧೆ

ರವಿಕುಮಾರ್
Published 25 ಜನವರಿ 2024, 22:28 IST
Last Updated 25 ಜನವರಿ 2024, 22:28 IST
ಪ್ರಾಣ
ಪ್ರಾಣ   

ಬೆಂಗಳೂರು: ಗಣರಾಜ್ಯೋತ್ಸದ ದಿನವಾದ ಶುಕ್ರವಾರ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ  ಬೆಂಗಳೂರು ಡರ್ಬಿ ಚಳಿಗಾಲದ ರೇಸ್‌ ನಡೆಯಲಿದೆ. 

ಇ ಗೇಮಿಂಗ್ ಸಂಸ್ಥೆಯಾಗಿರುವ ವಿನ್‌ಫೇರ್ 247 ಟೈಟಲ್ ಪ್ರಾಯೋಜಕತ್ವದಲ್ಲಿ ಈ ರೇಸ್ ನಡೆಯಲಿದೆ. ಇದರಲ್ಲಿ ಹತ್ತು ಕುದುರೆಗಳು ಸ್ಪರ್ಧೆಯಲ್ಲಿವೆ. ಈ ಡರ್ಬಿಯಲ್ಲಿ ಪೆಸಿ ಶ್ರಾಫ್‌ ತರಬೇತಿಯಲ್ಲಿ ಪಳಗಿರುವ ಜಮಾರಿ ಹಾಗೂ ಸುಲೈಮಾನ್‌ ಅತೋಲಾಹಿ ತರಬೇತಿಯಲ್ಲಿ ಪಳಗಿರುವ ತೆಹಾನಿ ಪ್ರಮುಖ ಸ್ಪರ್ಧಿಗಳು.

ಚಳಿಗಾಲದ 1000 ಗಿನ್ನಿಸ್ ಮತ್ತು ಓಕ್ಸ್‌ ರೇಸ್‌ಗಳಲ್ಲಿ ಇವೆರಡು ಕುದುರೆಗಳು ಪೈಪೋಟಿ ನಡೆಸಿದ್ದವು. ಎರಡು ಬಾರಿಯೂ ಜಮಾರಿ ಜಯಿಸಿತ್ತು. ಇಲ್ಲಿಯೂ  ತನ್ನ ಜಯದ ಓಟ ಮುಂದುವರಿಸುವತ್ತ ಜಮಾರಿ ವಿಶ್ವಾಸ ಮೂಡಿಸಿದೆ.

ADVERTISEMENT

ಚೆನ್ನೈನಲ್ಲಿ 1000 ಗಿನ್ನಿಸ್ ಮತ್ತು ಓಕ್ಸ್‌ನಲ್ಲಿ ಜಯಗಳಿಸಿರುವ ಸಮ್‌ಥಿಂಗ್‌ ರಾಯಲ್‌ ಮತ್ತು ಫಾಸ್ಟ್‌ ಪೇಸ್‌ ಉಳಿದ ಸ್ಥಾನಗಳಿಗಾಗಿ ಪೈಪೋಟಿ ನಡೆಸುವ ಸಾಧ್ಯತೆ ಇದೆ. ಸಂಜೆ 4.30ಕ್ಕೆ ಡರ್ಬಿ ರೇಸ್‌ ಆರಂಭವಾಗಲಿದೆ. 

₹ 1.71 ಕೋಟಿ ಬಹುಮಾನ: ಬೆಂಗಳೂರು ಚಳಿಗಾಲದ ಡರ್ಬಿಯು 51ನೇ ಆವೃತ್ತಿಯಾಗಿದೆ. ಡರ್ಬಿಯ ಒಟ್ಟು ಬಹುಮಾನದ ಮೊತ್ತವು ಸುಮಾರು ₹ 1.71 ಕೋಟಿಯಾಗಿದೆ. ಗೆಲ್ಲುವ ಕುದುರೆಯ ಮಾಲೀಕರು  ಅಂದಾಜು ₹ 80.72 ಲಕ್ಷ ಮತ್ತು ಟ್ರೋಫಿ ಪಡೆಯಲಿದ್ದಾರೆ. ಇದು ಚಳಿಗಾಲದ ರೇಸ್‌ಗಳಲ್ಲೇ ಗರಿಷ್ಠ ದಾಖಲೆಯ ಬಹುಮಾನವಾಗಿದೆ.

‌ರೇಸ್‌ ಪ್ರಿಯರಿಗೆ ಸ್ಪರ್ಧೆ: ರೇಸ್‌ ಪ್ರಿಯರಿಗೆ ಬಿಟಿಸಿ ಬುದ್ಧಿಕೌಶಲ ಸ್ಪರ್ಧೆಯನ್ನು ಏರ್ಪಡಿಸಿದೆ. ದಿನದ 4, 5 ಮತ್ತು 6ನೇ ರೇಸ್‌ಗಳಲ್ಲಿ ಗೆಲ್ಲುವ ಕುದುರೆಯನ್ನು ನಿಖರವಾಗಿ ಗುರುತಿಸಿದವರಿಗೆ ಮೊದಲನೇ ಬಹುಮಾನವಾಗಿ ಮಾರುತಿ ಆಲ್ಟೊ ಕೆ ಟೆನ್ ಸೇರಿದಂತೆ ಹಲವಾರು ಆಕರ್ಷಕ ಬಹುಮಾನಗಳನ್ನು ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.