ADVERTISEMENT

ಬಾರ್ಸಿಲೋನಾ ಬ್ಯಾಡ್ಮಿಂಟನ್‌ ಟೂರ್ನಿ: ಕ್ವಾರ್ಟರ್‌ಗೆ ಸೈನಾ

ಪಿಟಿಐ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಬಾರ್ಸಿಲೋನಾ: ಭಾರತದ ಸೈನಾ ನೆಹ್ವಾಲ್‌ ಹಾಗೂ ಸಮೀರ್‌ ವರ್ಮಾ ಅವರು ಬಾರ್ಸಿಲೋನಾ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಸಿಂಗಲ್ಸ್‌ ವಿಭಾಗಗಳಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಗುರುವಾರ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಗಳಲ್ಲಿ ಸೈನಾ 21–10, 21–19ರಿಂದ ಉಕ್ರೇನ್‌ನ ಮರಿಯಾ ಯುಲಿಟಿನಾ ವಿರುದ್ಧ ಗೆದ್ದರೆ, ಸಮೀರ್‌ ವರ್ಮಾ 21–14, 16–21, 21–15ರಿಂದ ಜರ್ಮನಿಯ ಕೈ ಶಾಫರ್‌ ಅವರನ್ನು ಮಣಿಸಿದರು.

ಮತ್ತೊಂದು ಹಣಾಹಣಿಯಲ್ಲಿ ಕಿಡಂಬಿ ಶ್ರೀಕಾಂತ್‌, ಭಾರತದವರೇ ಆದ ಅಜಯ್‌ ಜಯರಾಮ್‌ ವಿರುದ್ಧ 6–21, 17–21ರಿಂದ ಸೋತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.