ADVERTISEMENT

ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಓರಿಯನ್ಸ್‌, ಎಂಸಿಎಚ್‌ಎಸ್‌

13 ವರ್ಷದೊಳಗಿನವರ ರಾಜ್ಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 16:46 IST
Last Updated 20 ಜುಲೈ 2023, 16:46 IST

ಬೆಂಗಳೂರು: ಯಂಗ್‌ ಓರಿಯನ್ಸ್‌ ಎಸ್.ಸಿ ಮತ್ತು ಎಂಸಿಎಚ್‌ಎಸ್‌ ತಂಡಗಳು 13 ವರ್ಷದೊಳಗಿನವರ ರಾಜ್ಯ ಸಬ್‌ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿದವು.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಸೆಮಿಫೈನಲ್‌ ಪಂದ್ಯಗಳು ನಡೆದವು. ಅವ್ಯಮ್ (27) ಅವರ ಆಟದ ನೆರವಿನಿಂದ ಯಂಗ್‌ ಓರಿಯನ್ಸ್‌ ಎಸ್‌.ಸಿ ತಂಡವು ಎಸ್‌. ಬ್ಲೂಸ್‌ ತಂಡವನ್ನು 46–38ರಿಂದ ಮಣಿಸಿತು. ಮಧ್ಯಂತರದ ವೇಳೆಗೆ 24–28ರಿಂದ ಹಿಂದಿದ್ದ ಓರಿಯನ್ಸ್‌ ತಂಡ ನಂತರ ಮೇಲುಗೈ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಪ್ರದ್ಯುನ್ (25), ಆಶೆರ್‌ (22) ಅವರ ಆಟದ ಬಲದಿಂದ ಎಂಸಿಎಚ್‌ಎಸ್‌ ತಂಡವು ವಿಮಾನಪುರ ಎಸ್‌.ಸಿ ತಂಡವನ್ನು 66–46ರಿಂದ ಸೋಲಿಸಿತು.

ಬಾಲಕಿಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಆಲ್‌ ಸ್ಟಾರ್‌ ಅಕಾಡೆಮಿ ಮೈಸೂರು ತಂಡವು ಯಂಗ್‌ ಓರಿಯನ್ಸ್‌ ತಂಡವನ್ನು 29–27ರಿಂದ ಮಣಿಸಿತು. ಮಧ್ಯಂತರ ವೇಳೆಗೆ 16–24ರಷ್ಟು ಹಿಂದಿದ್ದ ಮೈಸೂರು ತಂಡವು ನಂತರ ಪುಟಿದೆದ್ದು, ಅಂಚಲ್ (16) ಅವರ ಆಟದ ಬಲದಿಂದ ಫೈನಲ್‌ ಪ್ರವೇಶಿಸಿತು. ಮತ್ತೊಂದು ಪಂದ್ಯದಲ್ಲಿ ಎಸ್‌. ಬ್ಲೂಸ್‌ ತಂಡವು ಅಪ್ಪಯ್ಯ ಬಿ.ಸಿ ತಂಡವನ್ನು 35–13ರಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.