ಬ್ಯಾಸ್ಕೆಟ್‌ಬಾಲ್
ಬೆಂಗಳೂರು: ಸುದೀಪ್ ಮತ್ತು ಪ್ರತೀಕ್ ಅವರ ಆಟದ ಬಲದಿಂದ ಬಾಷ್ ತಂಡವು ಎಂ.ಸಿ.ಶ್ರೀನಿವಾಸ್ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಬಿ ಡಿವಿಷನ್ ಪುರುಷರ ಬ್ಯಾಸ್ಕೆಟ್‌ಬಾಲ್ ಲೀಗ್ ಪಂದ್ಯದಲ್ಲಿ ಮಂಗಳವಾರ ವೈಎಂಎಂಎ ತಂಡವನ್ನು 67–42 ಅಂಕಗಳಿಂದ ಮಣಿಸಿತು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಷ್ ತಂಡದ ಪರ ಸುದೀಪ್ (34 ಅಂಕ) ಮತ್ತು ಪ್ರತೀಕ್ (17 ಅಂಕ) ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ವೈಎಂಎಂಎ ತಂಡದ ಪರ ಆಗಸ್ಟಿನ್ (16 ಅಂಕ) ಗಮನ ಸೆಳೆದರು.
ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ವ್ಯಾನ್‌ಗಾರ್ಡ್ಸ್ ತಂಡ 68– 56 ಅಂಕಗಳಿಂದ ದೇವಾಂಗ ಯೂನಿಯನ್ ತಂಡದ ವಿರುದ್ಧ ಜಯಿಸಿತು. ವ್ಯಾನ್‌ಗಾರ್ಡ್ಸ್ ತಂಡದ ಪರ ಅವಿನಾಶ್ (17 ಅಂಕ) ಮತ್ತು ವರುಣ್ ಅಸ್ನಾನಿ (14 ಅಂಕ) ತಂಡದ ಗೆಲುವಿಗೆ ನೆರವಾದರು. ದೇವಾಂಗ ಯೂನಿಯನ್ ಪರ ರಿಷಿ (14 ಅಂಕ), ರೋಹನ್ ಸಂಘಾಲ್ (10 ಅಂಕ) ಹೋರಾಟ ವ್ಯರ್ಥವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.