ADVERTISEMENT

ಕರ್ನಾಟಕ ಗ್ರಾಮೀಣ ಬ್ಯಾಸ್ಕೆಟ್‌ಬಾಲ್‌ ಲೀಗ್‌: ಮಂಗಳೂರು ಬಿಸಿ ತಂಡ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 14:27 IST
Last Updated 6 ಏಪ್ರಿಲ್ 2025, 14:27 IST
<div class="paragraphs"><p>ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ ಆಶ್ರಯದಲ್ಲಿ ನಡೆದ ಕರ್ನಾಟಕ ಗ್ರಾಮೀಣ ಬ್ಯಾಸ್ಕೆಟ್‌ಬಾಲ್‌ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡ&nbsp;</p></div>

ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ ಆಶ್ರಯದಲ್ಲಿ ನಡೆದ ಕರ್ನಾಟಕ ಗ್ರಾಮೀಣ ಬ್ಯಾಸ್ಕೆಟ್‌ಬಾಲ್‌ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡ 

   

ಬೆಂಗಳೂರು: ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡ ಕರ್ನಾಟಕ ಗ್ರಾಮೀಣ ಬ್ಯಾಸ್ಕೆಟ್‌ಬಾಲ್‌ ಲೀಗ್‌ನ ಫೈನಲ್‌ನಲ್ಲಿ ಭಾನುವಾರ 90–58 ಅಂಕಗಳಿಂದ ವಿಬಿಸಿ ಮಂಡ್ಯ ತಂಡವನ್ನು ಮಣಿಸಿ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿದೆ.  

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡದ ಪ್ರಸ್ತಿಕ್‌ (31 ಅಂಕ), ಶಶಾಂಕ್‌ ರೈ (19 ಅಂಕ) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮಂಡ್ಯ ತಂಡದ ಶಶಾಂಕ್‌ ಗೌಡ (20 ಅಂಕ) ಹೋರಾಟ ಫಲ ನೀಡಲಿಲ್ಲ.

ADVERTISEMENT

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕುವೆಂಪು ಬಿಸಿ ಕಲಬುರಗಿ ತಂಡ 98–97 ಅಂಕಗಳಿಂದ ಮಲ್ಲಸಜ್ಜನ್‌ ಬಿಸಿ ಧಾರವಾಡ ವಿರುದ್ಧ ಒಂದು ಅಂಕದಿಂದ ರೋಚಕ ಗೆಲುವು ಪಡೆಯಿತು. ಕಲಬುರಗಿ ತಂಡದ ಸುರೇಶ್‌ (32 ಅಂಕ) ಮತ್ತು ಸಿರಾಜುದ್ದಿನ್‌ (32 ಅಂಕ) ಅಮೋಘ ಪ್ರದರ್ಶನ ನೀಡಿದರು.ಧಾರವಾಡ ತಂಡದ ಮಂಜುನಾಥ್‌ (52 ಅಂಕ) ಮತ್ತು ಕಾರ್ತಿಕ್‌ (29 ಅಂಕ) ನೀಡಿದ ಹೋರಾಟ ವ್ಯರ್ಥವಾಯಿತು.

ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡದ ಪ್ರಸ್ತಿಕ್‌ ಟೂರ್ನಿ ಆಟಗಾರ ಪ್ರಶಸ್ತಿಗೆ ಭಾಜನರಾದರು. ಚಾಂಪಿಯನ್‌ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡಕ್ಕೆ 75 ಸಾವಿರ ರೂಪಾಯಿ ನಗದು ಬಹುಮಾನ, ರನ್ನರ್‌ಅಪ್‌ ವಿಬಿಸಿ ಮಂಡ್ಯ ತಂಡಕ್ಕೆ 50 ಸಾವಿರ ರೂಪಾಯಿ ನಗದು ಬಹುಮಾನ, ಮೂರನೇ ಸ್ಥಾನ ಪಡೆದ ಕಲಬುರಗಿ ತಂಡಕ್ಕೆ 25 ಸಾವಿರ ರೂ.ಬಹುಮಾನ ಮತ್ತು ನಾಲ್ಕನೆ ಸ್ಥಾನ ಪಡೆದ ಧಾರವಾಡ ತಂಡಕ್ಕೆ 15 ಸಾವಿರ ಬಹುಮಾನ ನೀಡಲಾಯಿತು. ಒಟ್ಟು 1,70,000 ರೂಪಾಯಿ ಬಹುಮಾನ ವಿತರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.