ADVERTISEMENT

ಬ್ಯಾಸ್ಕೆಟ್‌ಬಾಲ್‌: ಮೈಸೂರು ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:31 IST
Last Updated 29 ಜೂನ್ 2025, 16:31 IST
<div class="paragraphs"><p>ಬ್ಯಾಸ್ಕೆಟ್‌ಬಾಲ್‌</p></div>

ಬ್ಯಾಸ್ಕೆಟ್‌ಬಾಲ್‌

   

ಬೆಂಗಳೂರು: ಶಕ್ತಿ (33) ಮತ್ತು ಕ್ಷಿತಿಜ್ (16) ಅವರ ಆಟದ ನೆರವಿನಿಂದ ಮೈಸೂರು ಜಿಲ್ಲಾ ಬಿ ತಂಡವು ಎಸ್‌.ರಂಗರಾಜನ್‌ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಸಿ ಡಿವಿಷನ್‌ ಲೀಗ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 76–62ರಿಂದ ಕೈಗಾ ಬಿ.ಸಿ ಕಾರವಾರ ತಂಡವನ್ನು ಮಣಿಸಿತು.

ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಆಶ್ರಯದಲ್ಲಿ ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಲೀಗ್‌ ಹಂತದ ಪಂದ್ಯದಲ್ಲಿ ವಿರಾಮದ ವೇಳೆ ಆರು ಅಂಕಗಳ (36–30) ಮುನ್ನಡೆ ಪಡೆದಿದ್ದ ಮೈಸೂರು ತಂಡವು ಉತ್ತರಾರ್ಧದಲ್ಲೂ ಮೇಲುಗೈ ಸಾಧಿಸಿತು. ಕೈಗಾ ತಂಡದ ಅರ್ಪಿತ್‌ 24, ರವಿರಾಜ್‌ 10 ಅಂಕ ತಂದಿತ್ತರು. 

ADVERTISEMENT

ಫಲಿತಾಂಶ: ಲೀಗ್‌ ಹಂತ: ಮೈಸೂರು ಜಿಲ್ಲೆ ಎ (ಚಂದನ್‌ 22, ಸಾಹಿಲ್ ಆಳ್ವ 17) 75–25 ಶಿವಮೊಗ್ಗ ಜಿಲ್ಲೆ (ಪ್ರಮೋದ್‌ 18) ವಿರುದ್ಧ; ಮೈಸೂರು ಜಿಲ್ಲೆ ಬಿ ( ಶಕ್ತಿ 33, ಕ್ಷಿತಿಜ್‌ 16) 76–62ರಿಂದ ಕೈಗಾ ಬಿ.ಸಿ ಕಾರವಾರ (ಅರ್ಪಿತ್‌ 24, ರವಿರಾಜ್‌ 10) ವಿರುದ್ಧ; ಕೋಲಾರ ಜಿಲ್ಲೆ (ಭರತ್‌ 16) 47–21 ರಾಮನಗರ ಜಿಲ್ಲೆ (ಸೂರ್ಯ 16) ವಿರುದ್ಧ; ಧಾರವಾಡ ಜಿಲ್ಲೆ ಬಿ (ಅಭಿಷೇಕ್‌ 25, ರಮೇಶ್‌ 15) 63–59 ಚಿಕ್ಕಬಳ್ಳಾಪುರ ಜಿಲ್ಲೆ (ವೇಣು 17, ಪವನ್‌ 11) ವಿರುದ್ಧ; ಚಿಕ್ಕಮಗಳೂರು ಜಿಲ್ಲೆ (ರೆಹಾನ್‌ ಖಾನ್‌ 19) 65–55 ಹಾಸನ ಜಿಲ್ಲೆ (ಆದರ್ಶ್ 17) ವಿರುದ್ಧ; ಕೋಲಾರ ಜಿಲ್ಲೆ (ಭರತ್‌ 19, ಹೇಮಂತ್‌ 14) 71–44 ಚಾಮರಾಜನಗರ ಜಿಲ್ಲೆ (ಅಭಿಷೇಕ್‌ 20, ಯಶವಂತ್‌ 11) ವಿರುದ್ಧ ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.